ಪಾಕ್ ಪರ ಘೋಷಣೆ: ಸದನದಲ್ಲಿ ಆರ್.ಅಶೋಕ್ ಕೆಂಡಾಮಂಡಲ

ಪಾಕ್ ಪರ ಘೋಷಣೆ: ಸದನದಲ್ಲಿ ಆರ್.ಅಶೋಕ್ ಕೆಂಡಾಮಂಡಲ

ಬೆಂಗಳೂರು: ನಿನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್  ಮೂವರು  ಬಿಜೆಪಿಯ ಓರ್ವ ಅಭ್ಯರ್ಥಿ ಜಯ ಸಾಧಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ನಾಸಿರ್ ಹುಸೇನ್ ಜಯಗಳಿಸಿ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿರುವ ಆರೋಪ ಕೇಳಿ ಬಂದಿದೆ.

ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ ಎಂಬ ಆರೋಪ ಇಂದು ವಿಧಾನಸಭೆ ಕಲಾಪದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಈ ವಿಚಾರವನ್ನ ಪ್ರಸ್ತಾಪಿಸಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.  ವಿಧಾನಸೌಧದಂತ ಪವಿತ್ರ ಸ್ಥಳದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಆರೋಪಿಗಳನ್ನ ಇನ್ನೂ ಕೂಡ ಬಂಧಿಸಿಲ್ಲ ಅವರನ್ನ ಬಿರಿಯಾನಿ ಹಾಕಿ ಸಾಕಿ ಎಂದು ಆಕ್ರೋಶ ಹೊರಹಾಕಿದರು.

ಘೋಷಣೆ ಕೂಗಿದವರ  ವಿರುದ್ದ ಈವರೆಗೆ ಯಾವುದೇ ಕ್ರಮವಿಲ್ಲ. ನಮಗೆ ಭಯ ಆಗುತ್ತಿದೆ. ವಿಧಾನಸೌಧ ದಲ್ಲಿ ಇನ್ನೂ ಎಷ್ಟು ಉಗ್ರರು ಇದ್ದಾರೆಯೋ. ನಮಗೆ ಭಯ ಆಗುತ್ತಿದೆ ನಮಗೆ  ಭದ್ರತೆ ಇನ್ನೆಲ್ಲಿ ಸಿಗುತ್ತೆ ಹೇಳಿ ಎಂದು ಕಿಡಿಕಾರಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos