ಬೆಂಗಳೂರು, ಆ. 28: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಮೂಡಿಬರುತ್ತಿರುವ ಚಿತ್ರಗಳು ಸುಪರ್ ಹಿಟ್ ಆಗುತ್ತಿದ್ದಾವೆ. ಹೌದು, ಡಿ. ಬಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ರಾಬರ್ಟ್’. ‘ರಾಬರ್ಟ್’ ಚಿತ್ರಕ್ಕೆ ಇದೀಗ ನಾಯಕಿ ಸಿಕ್ಕಿದ್ದಾರೆ ಎನ್ನಲಾಗಿದೆ. ಚಿತ್ರ ಶುರುವಾದಾಗಿನಿಂದಲೂ ಕೂಡ ‘ರಾಬರ್ಟ್’ ಚಿತ್ರಕ್ಕೆ ಯಾರು ನಾಯಕಿ ಎಂಬ ಚರ್ಚೆಯಾಗಿತ್ತು. ಇದೀಗ ಟಾಲಿವುಡ್ ಬೆಡಗಿ ಮೆಹ್ರೆನ್ ಸ್ಯಾಂಡಲ್ ವುಡ್ ಮೂಲಕ ದಚ್ಚು ಜೊತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ಟಾಲಿವುಡ್ ಬ್ಯೂಟಿ ಮೆಹ್ರೆನ್ ಕೌರ್ ಪಿರ್ಜಾಡಾ ನಟಿಸಲಿದ್ದಾರೆ. ಪಂಜಾಬಿ ಹುಡುಗಿ ಬಾಲಿವುಡ್ ‘ಫಿಲ್ಲೌರಿ’ ಚಿತ್ರ ಮೂಲಕ ಎಂಟ್ರಿ ನೀಡಿದರು. ಬಳಿಕ ವಿಜಯ್ ದೇವರಕೊಂಡ ಜೊತೆ ಮತ್ತು ವಿಕ್ಟರಿ ವೆಂಕಟೇಶ್ ಹಾಗೂ ವರುಣ್ ತೇಜ್ ಒಳಗೊಂಡ, ‘ಎಫ್ 2’ ಚಿತ್ರದಲ್ಲೂ ನಟಿಸಿ ಟಾಲಿವುಡ್ ನಲ್ಲಿ ಪರಿಚಿತರಾಗಿದ್ದಾರೆ. ಸದ್ಯ ಧನುಷ್ ಎದುರು ತಮಿಳು ಚಿತ್ರದಲ್ಲೂ ಸಹ ನಟಿಸಲಿದ್ದಾರೆ.