ಉತ್ತಮ ಆರೋಗ್ಯಕ್ಕೆ ಪುದೀನಾ

ಉತ್ತಮ ಆರೋಗ್ಯಕ್ಕೆ ಪುದೀನಾ

ಬೆಂಗಳೂರು, ಮಾ.29, ನ್ಯೂಸ್‍ ಎಕ್ಸ್ ಪ್ರೆಸ್‍: ಹಿಂದಿನ ಕಾಲದಲ್ಲಿ ಅನಾರೋಗ್ಯವಾದಾಗ ಇಂದಿನ ಹಾಗೆ ಯಾರು ಆಸ್ಪತ್ರೆಗೆ ಬರುತ್ತಿರಲಿಲ್ಲ. ಬದಲಿಗೆ ಔಷಧಿ ಸತ್ವವುಳ್ಳ ಗಿಡಮೂಲಿಕೆಗಳಿಂದ ಕಾಯಿಲೆಗೆ ತಕ್ಕುದಾದ ಮದ್ದು ಮನೆಯಲ್ಲಿಯೇ ತಯಾರಿಸುತ್ತಿದ್ದರು. ಅಂತಹ ಸಾಲಿಗೆ ಸೇರಲ್ಪಟ್ಟಿದೆ ನಾವು ದಿನ ನಿತ್ಯ ಉಪಯೋಗಿಸುವ ಪುದೀನಾ.

ನಮ್ಮ ನಿತ್ಯದ ಬಳಕೆಯಲ್ಲಿ ಪುದೀನಾವನ್ನು ಬಳಸುವುದು ಹಲವರಿಗೆ ತಿಳಿದೇ ಇರುವುದಿಲ್ಲ! ಉದಾಹರಣೆಗೆ ಪ್ರತಿದಿನ ನಾವು ಬಳಸುವ ಟೂಥ್ ಪೇಸ್ಟ್. ಉಸಿರಿನ ತಾಜಾತನಕ್ಕೆ ಕಾರಣವಾದ ಪುದೀನಾ ದಿಂದ ಆಗುವ ಇನ್ನಿತರ ಪ್ರಯೋಜನದ ಬಗ್ಗೆ ನಮಗೆ ಯಾರಿಗೂ ಗೊತ್ತೇ ಇರುವುದಿಲ್ಲ.

ಪುದೀನಾ ಔಷಧಿಯ ಗುಣವುಳ್ಳ ಗಿಡಮೂಲಿಕೆ. ಹೆಚ್ಚಾಗಿ ಕಂಡು ಬರುವ ಶೀತ, ಕಫ, ಕೆಮ್ಮು, ಅಜೀರ್ಣದಂತಹ ಖಾಯಿಲೆಗೆ ಇದು ಹೇಳಿ ಮಾಡಿಸಿದ ಮದ್ದು. ಪುದೀನಾ ಎಲೆಗಳಿಗೆ ಅದರದೇ ಆದ ವಿಶಿಷ್ಟ ಪರಿಮಳವಿದೆ. ವಾಕರಿಕೆಯನ್ನು ದೂರಗೊಳಿಸಲು ಇದು ಸಹಕಾರಿ. ಇದರಲ್ಲಿ ಆಯಂಟಿ ಬ್ಯಾಕ್ಟೀರಿಯಾ ಮತ್ತು ಉರಿ ಕಡಿಮೆ ಮಾಡುವ ಗುಣವಿರುವ ಕಾರಣ ಇದು ಹಲವು ಖಾಯಿಲೆಗಳಿಗೆ ರಾಮಬಾಣ. ಬಾಯಿಯ ಆರೋಗ್ಯಕ್ಕೂ ಇದು ಒಳ್ಳೆಯದು. ಸಾಮಾನ್ಯವಾಗಿ ಕಂಡು ಬರುವ ಅಲರ್ಜಿಗೆ ಇದು ಒಳ್ಳೆಯ ಮದ್ದು. ಅದರ ರಸವನ್ನು ತೆಗೆದು ಹಚ್ಚಿದರೆ ಅಲರ್ಜಿ ಕಡಿಮೆಯಾಗುತ್ತದೆ.

ಮುಖದ ಮೇಲೆ ಮೂಡುವ ಮೊಡವೆ ಕೆಲವರಿಗೆ ಸಮಸ್ಯೆಯಾದರೆ ಇನ್ನು ಕೆಲವರಿಗೆ ಮುಖದಲ್ಲಿ ಇರುವ ಕಲೆಗಳ ಬಗ್ಗೆ ಚಿಂತೆ. ಅದಕ್ಕೆ ಪುದೀನಾ ಎಲೆಯನ್ನು ಜಜ್ಜಿ ಬಳಸಬಹುದು. ತ್ವಚೆಯ ಸೋಂಕುಗಳನ್ನು ಗುಣಪಡಿಸುವ ಸಾಮಾರ್ಥ್ಯ ಇರುವ ಪುದೀನಾ ತ್ವಚೆಯನ್ನು ತಂಪಗೆ ಇಡುತ್ತದೆ. ಗಂಟಲು ಮತ್ತು ಕಟ್ಟಿದ ಮೂಗಿಗೆ ಪರಿಹಾರ ನೀಡುವ ಇದು ಶ್ವಾಸಕೋಶವನ್ನು ಶುಚಿಯಾಗಿಡುತ್ತದೆ. ಜೀರ್ಣಕ್ರಿಯೆಯನ್ನು ವೃದ್ಧಿಗೊಳಿಸುವ ಪುದೀನಾಕ್ಕೆ ಮಾರಕ ರೋಗವಾದ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯಿದೆ. ಇದರಲ್ಲಿ ಇರುವ ವಿಟಮಿನ್ ಬಿ, ಸಿ, ಡಿ ಮತ್ತು ಎಫ್ ಸೋಂಕನ್ನು ನಿವಾರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತಿಂಗಳ ಮುಟ್ಟಿನ ಸಮಯದಲ್ಲಿ ವಿಪರೀತ ಹೊಟ್ಟೆಬೇನೆಯಿಂದ ನರಳುವವರು ಪುದೀನಾ ಜ್ಯೂಸ್ ಕುಡಿದರೆ ಸಾಕು, ಹೊಟ್ಟೆ ನೋವು ನಿವಾರಣೆಯಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos