ಮಹದೇವ ಪುರ, ಆ. 30: ಇಂದು ಮಹದೇವ ಪುರ ಕ್ಷೇತ್ರ ಗ್ರಾಮಾಂತರ ಪ್ರದೇಶಗಳಲ್ಲಿ ಜಿಲ್ಲಾ ಪಂಚಾಯತ ಮತ್ತು ಪಿಡ್ಬ್ಲೂಯೂ ಡಿ ಅನುದಾನ 4 ಕೋಟಿ 40 ಲಕ್ಷ ರೂ. ಗಳ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಗುದ್ದಲಿ ಪೂಜೆ ನೇರವೆಸಿದ ಕ್ಷೇತ್ರದ ಶಾಸಕರಾದ ಅರವಿಂದ್ ಲಿಂಬಾವಳಿ ಯವರು.
ಹಾಲನಾಯಕ್ನಹಳ್ಳಿ ಮತ್ತು ಕೊಡತಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಾಲನಾಯಕನಹಳ್ಳಿ. ಕೊಡತಿ, ಸೂಲುಕುಂಟೆ ಕಾಲೋನಿ, ಮುಳ್ಳೂರು, ರವಿಶಂಕರ್ ಸ್ಕೂಲ್, ವಾಲೆಪುರ ದಿನ್ನೆ ಗ್ರಾಮಗಳಲ್ಲಿ ಕಾಂಕ್ರೀಟ್ ಡಾಂಬರಿಕರಣ ರಸ್ತೆ ಚರಂಡಿಗಳ ಅಭಿವೃದ್ದಿ ಕಾರ್ಯಗಳಿಗೆ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ತಾಲ್ಲೂಕು ಗ್ರಾಮಪಂಚಾಯಿತಿಯ ಸದಸ್ಯರಗಳು, ಪಕ್ಷದ ಹಿರಿಯ ಮುಖಂಡರಗಳು, ಗ್ರಾಮಸ್ಥರು, ಸಂಬದ ಪಟ್ಟ ಅದಿಕಾರಿಗಳು, ಗುತ್ತಿಗೆ ದಾರರು ಬಾಗವಹಿದರು.