ಮಹದೇವಪುರ, ಡಿ. 23: ಕ್ರೀಡೆ ಹಾಗೂ ವ್ಯಾಯಾಮಗಳಿಂದ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಡಬಹುದು ಎಂದು ಸ್ಥಳಿಯ ಶಾಸಕ ಅರವಿಂದ್ ಲಿಂಬಾವಳಿ ತಿಳಿಸಿದರು.
ವೈಟ್ ಫಿಲ್ಡ್ ನ ಇ.ಎಲ್.ವಿ ಪ್ರಾಜೆಟ್ಸ್ ಮಾಲಿಕ ಈ. ಬಾಸ್ಕರ್ ಮತ್ತು ಜಿ.ಎಲ್.ಆರ್ ಬಿಲ್ಡರ್ಸ್ ಮಾಲಿಕ ಎಲ್. ರಾಜೇಶ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಎಲ್ವಿ ಕ್ರಿಕೆಟ್ ಚಾಂಪಿಯನ್ ಟ್ರೋಫಿ ಕ್ರೀಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರೀಡೆಗಳು ಮನುಷ್ಯನ ದೇಹವನ್ನು ಆರೋಗ್ಯವಾಗಿ ಮಾತ್ರವಲ್ಲದೇ ಮಾನಸಿಕ ಒತ್ತಡವನ್ನು ನಿಯಂತ್ರದಲ್ಲಿರಿಸಲು ಸಹಕಾರಿಯಾಗುತ್ತವೆ ಎಂದರು. ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳೊಂದಿಗೆ ಯೋಗ, ಕ್ರೀಡೆಗಳು ಮತ್ತು ವ್ಯಾಯಾಮ ಆಧಾರಿತ ಚಟುವಟಿಕೆಗಳು ಈಗಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಪ್ರತಿ ನಿತ್ಯ ಒಂದು ಗಂಟೆ ಸಮಯವನ್ನು ಕ್ರೀಡೆಗಳಿಗೆ ಮೀಸಲಿಡಲು ಸಲಹೆ ನೀಡಿದರು.
ವೈಟ್ ಫೀಲ್ಡ್ ವಿಭಾಗದ ಪೋಲಿಸರ ತಂಡ ಮತ್ತು ಸಾರ್ವಜನಿಕರ ತಂಡ ಫೈನಲ್ ಪದ್ಯಕ್ಕೆ ಸೇರಿದ್ದು, ಈ ಕ್ರಿಕೆಟ್ ಪದ್ಯದಲ್ಲಿ ಜಿ.ಎಲ್.ಆರ್ ದಂಡ ಟ್ರೋಫಿ ಮತ್ತು ಒಂದು ಲಕ್ಷ ನಗದು ಬಹುಮಾನವನ್ನು ಗಳಿಸಿದರು.
ಒಫಾಂ ನಲ್ಲಿರುವ ಡಿವೈನ್ ಲೈಟ್ ಅಂದ ಶಾಲಾ ಮಕ್ಕಳಿಗೆ ಜಿ.ಎಲ್.ವಿ ತಂಡದಿಂದ 50 ಸಾವಿರ ಹಾಗೂ ಪೋಲಿಸರ ದಂಡದಿಂದ 25 ಸಾವಿರ ರೂ.ಗಳ ಚೆಕ್ ಸ್ಥಳಿಯ ಶಾಸಕ ಅರವಿಂದ್ ಲಿಂಬಾವಳಿ ಮತ್ತು ವೈಟ್ ಫೀಲ್ಡ್ ಡಿಸಿಪಿ ಅನುಚೇತ್ ಅವರಿಂದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಎನ್.ಶ್ರೀಧರ್ ರೆಡ್ಡಿ, ಮುಖಂಡರಾದ ವರ್ತೂರು ಶ್ರೀಧರ್, ಚನ್ನಸಂದ್ರ ಚಂದ್ರಶೇಖರ್, ಗುರು, ಪಿಲ್ಲಪ್ಪ, ಕೃಷ್ಣಮೂರ್ತಿ ಹಾಗೂ ಇತರೆ ಹಲವಾರು ಮುಖಂಡರು ಭಾಗವಹಿಸಿದ್ದರು.