ಅನುಚಿತವಾಗಿ ವರ್ತಿಸಿದ ಪಿಎಸ್‌ಐ ಸಸ್ಪೆಂಡ್, ವಕೀಲರ ಸಂಘ ಸ್ವಾಗತ

ಅನುಚಿತವಾಗಿ ವರ್ತಿಸಿದ ಪಿಎಸ್‌ಐ ಸಸ್ಪೆಂಡ್, ವಕೀಲರ ಸಂಘ ಸ್ವಾಗತ

ರಾಯಚೂರು, ಏ. 27, ನ್ಯೂಸ್ ಎಕ್ಸ್ ಪ್ರೆಸ್: ನ್ಯಾಯವಾದಿ ವೀರಯ್ಯ ಮೇಲೆ ಹಲ್ಲೆ ನಡೆಸಿರುವ ನಗರದ ಪಶ್ಚಿಮ ಠಾಣೆ ಪಿಎಸ್‌ಐ ನಾಗರಾಜ ಮೇಕಾ ಅವರನ್ನು ಸೇವೆಯಿಂದ ಅಮಾನತು ಗೊಳಿಸಿರುವುದನ್ನು ಸ್ವಾಗತಿಸಿರುವ ಜಿಲ್ಲಾ ನ್ಯಾಯವಾದಿಗಳ ಸಂಘ ಅವರನ್ನು ಜಿಲ್ಲೆಯಿಂದ ಬೇರೆಕಡೆಗೆ ವರ್ಗಾಯಿಸುವಂತೆ ಒತ್ತಾಯಿಸಿದೆ. ಸಂಘದ ಅಧ್ಯಕ್ಷ ಭಾನುರಾಜ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಕಾರಣವಿಲ್ಲದೆ ಪಿಎಸ್‌ಐ ನಾಗರಾಜ ಒಬ್ಬ ವಿಕಲಚೇತನ ವಕೀಲರೊಂದಿಗೆ ಅಸಭ್ಯವಾಗಿ ವರ್ತಿ ಸಿದ್ದಲ್ಲದೆ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದು ಖಂಡನೀಯವಾಗಿದೆ. ಜಿಲ್ಲಾ ಪೊಲೀಸ ಧಿಕಾರಿಗಳು ಈಗಾಗಲೇ ಸದರಿ ಪಿಎಸ್‌ಐಯನ್ನು ಸೇವೆ ಯಿಂದ ಅಮಾನತು ಮಾಡಿ ಆದೇಶ ಹೊರಡಿಸಿರುವುದಾಗಿ ತಿಳಿದು ಬಂದಿದೆ ಆದರೆ ಆದೇಶದ ಪ್ರತಿ ನಮಗೆ ಸಿಕ್ಕಿಲ್ಲ. ಆದರೆ ಇಂಥ ಪಿಎಸ್‌ಐಗಳನ್ನು ಬರೀ ಅಮಾನತು ಮಾಡಿದರೆ ಸಾಲದು ವರ್ಗಾವಣೆ ಮಾಡಿ ಮುಂದೆ ಇಂತಹ ಘಟನೆಗಳು ಜರುಗದಂತೆ ನೋಡಿಕೊಳ್ಳಬೇಕೆಂದು ಭಾನುರಾಜ ಒತ್ತಾಯಿಸಿದರು. ಪೊಲೀಸರು ಸಹ ಪ್ರಭಾವಿಗಳ ಒತ್ತಡಕ್ಕೆ ಮಣಿದು ಮನಬಂದಂತೆ ಕರ್ತವ್ಯ ನಿರ್ವಹಿಸುತ್ತಿರುವುದು ಖಂಡನೀಯವಾಗಿದ್ದು, ಅವರು ತಮ್ಮ ಕರ್ತವ್ಯ ಪರಿಯನ್ನು ಬದಲಿಸಿ ಕೊಳ್ಳಬೇಕೆಂದರು. ಇಲ್ಲವಾದರೆ ಸಮಾಜ ಮತ್ತು ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಿಸಿದ ಅವರು, ಮುಂದೆ ಇಂತಹ ಘಟ ನೆಗಳು ಮರುಕಳಿ ಸಿದಲ್ಲಿ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದರು. ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳಾದ ಶ್ರೀಧರ ಎಲಿ, ಪಿ.ಬಸವರಾಜ, ನಜೀರ್ ಅಹ್ಮದ್, ಪಿ.ಎಸ್.ವೀರೇಶ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos