ಪ್ರಧಾನಿ ವಿರುದ್ಧ ಅವಹೇಳನ ಕಾರಿ ಸರಿಯಲ್ಲ

ಪ್ರಧಾನಿ ವಿರುದ್ಧ ಅವಹೇಳನ ಕಾರಿ ಸರಿಯಲ್ಲ

ದಕ್ಷಿಣ ಕೋರಿಯಾ, ಆ. 19 : ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಕೆಲ ಪಾತಕಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಡೆದಿದೆ. ಬಿಜೆಪಿ ನಾಯಕಿ ಶಾಜಿಯಾ ಇಲ್ಮಿ ಅವರು, ಗ್ಲೋಬಲ್ ಸಿಟಿಜನ್ ಫೋರಂ ನಿಯೋಗದೊಂದಿಗೆ ಯುನೈಟೆಡ್ ಫೀಸ್ ಫೆಡರೇಶನ್ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಆರ್ಟಿಕಲ್ 370 ರದ್ದು ವಿಚಾರವಾಗಿ ಕೆಲವರು ಪಾಕಿಸ್ತಾನದ ಧ್ಜಜಗಳನ್ನು ಹಿಡಿದು ಭಾರತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.
ಈ ವೇಳೆ ಪಾಕಿಗಳನ್ನು ತರಾಟೆಗೆ ತೆಗೆದುಕೊಂಡ ಶಾಜಿಯಾ, ಸಂವಿಧಾನದ 370ನೇ ವಿಧಿಯನ್ನು ಕಿತ್ತೊಗೆದಿರುವುದು ಭಾರತದ ಆಂತರಿಕ ವಿಚಾರವಾಗಿದ್ದು, ಈ ವಿಚಾರವಾಗಿ ಪಾಕಿಸ್ತಾನಿಯರಿಗೆ ಪ್ರಶ್ನಿಸುವ ಯಾವ ಹಕ್ಕೂ ಇಲ್ಲ. ನಮ್ಮ ದೇಶ ಹಾಗೂ ಪ್ರಧಾನಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದು ಸರಿ ಬರುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos