ಮಹಾಲಿಂಗಪುರ : ದೇಶಿ ಕ್ರೀಡೆ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ, ಮನಸ್ಸು ಬುದ್ಧಿ ಸಮತೋಲನದಲ್ಲಿ ಸಾಗಿದರೆ ಯಶಸ್ಸು ಸಾಧ್ಯ ಎಂದು ಕೆಪಿಸಿಸಿ ತೇರದಾಳ ಮತಕ್ಷೇತ್ರದ ಕಿಸಾನ ಘಟಕದ ಸಂಚಾಲಕ ಡಾ. ಪದ್ಮಜೀತ ನಾಡಗೌಡ ಹೇಳಿದರು.
ಬಸವೇಶ್ವರ ಜಾತ್ರಾ ಕಮೀಟಿ ಹಾಗೂ ಪುರಸಭೆ ಮಹಾಲಿಂಗಪುರ ಇವರ ಆಶ್ರಯದಲ್ಲಿ 2 ದಿನಗಳ ಕಾಲ ನಡೆದ ರಾಜ್ಯ ಮಟ್ಟದ ತೆರೆಬಂಡಿ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಸಮೀಪದ ವಡರಟ್ಟಿಯ ರೇವಣ ಶ್ರೀ ಸಿದ್ದೇಶ್ವರ ಪ್ರಸನ್ನ ತಂಡದ ಎತ್ತುಗಳು ಪ್ರಥಮ 1 ಲಕ್ಷ ಬಹುಮಾನ ಪಡೆದರೆ. ಬನಹಟ್ಟಿಯ ಶ್ರೀ ಕಾಡಸಿದ್ದೇಶ್ವರ ಪ್ರಸನ್ನ ತಂಡದ ಎತ್ತುಗಳು ದ್ವೀತಿಯ ಬಹುಮಾನ, ಶ್ರೀ ಲಕ್ಷೀದೇವಿ ಪ್ರಸನ್ನ ತಂಡದ ತೃತೀಯ ಬಹುಮಾನ, ನಿಂಗನೂರಿನ ಶ್ರೀ ಸತ್ಯದೇವಿ ಪ್ರಸನ್ನ ತಂಡದ ಎತ್ತುಗಳು ಚತುರ್ಥ ಬಹುಮಾನವನ್ನು ಪಡೆದುಕೊಂಡವು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾತ್ರಾ ಕಮೀಟಿ ಅಧ್ಯಕ್ಷ ಯಲ್ಲನಗೌಡ ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಂಕರ ಸೋರಗಾಂವಿ, ಸಾಗರ ಚವಚ, ರವಿ ಬಾಡಗಿ, ಶ್ರೀನಿವಾಸ ಮಾಲಬಸರಿ, ವಿಜಯ ಮಾಲಬಸರಿ, ಶ್ರೀಶೈಲ ಬಜಂತ್ರಿ, ಮಹಾಲಿಂಗಪ್ಪ ತಟ್ಟಿಮನಿ, ನಿಂಗಪ್ಪ ಬಾಳಿಕಾಯಿ, ಕೃಷ್ಣಗೌಡ ಪಾಟೀಲ, ರವಿಗೌಡ ಪಾಟೀಲ, ದೇವರೇಶ ಉಳ್ಳಾಗಡ್ಡಿ, ರವಿ ಬಿದರಿ, ವಿಠಲ ಕುಳಲಿ, ಕಲ್ಲಪ್ಪ ಹೆಬ್ಬಾಳ, ಅನೀಲ ದೇಸಾಯಿ, ವೆಂಕಣ್ಣ ಕಣಬೂರ, ಸುನೀಳಗೌಡ ಪಾಟೀಲ, ಸಂಜು ಅಮ್ಮಣಗಿಮಠ, ಅಶೋಕ ತಳವಾರ, ಆನಂದ ಬಂಡಿ, ಬ್ಯಾಕೋಡ್ ಸರ್, ಕುಮಾರ ಬೊರಡ್ಡಿ ಇದ್ದರು.