ಪ್ರೇಯಸಿಗೆ ಬೆಂಕಿ ಹಚ್ಚಿದ ಯುವಕ

ಪ್ರೇಯಸಿಗೆ ಬೆಂಕಿ ಹಚ್ಚಿದ ಯುವಕ

ಕೊಚ್ಚಿ,ಅ. 10 : ತಾನು ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲು ಒಪ್ಪಲಿಲ್ಲ ಎಂದು ಆಕೆಗೆ ಬೆಂಕಿ ಹಚ್ಚಿ ತಾನೂ ಸಾವನ್ನಪ್ಪಿದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. 24 ವರ್ಷದ ಮಿಥುನ್ 17 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಆದರೆ, ತನ್ನನ್ನು ಮದುವೆಯಾಗಲು ಆಕೆ ಒಪ್ಪಲಿಲ್ಲ ಎಂದು ಕೋಪಗೊಂಡಿದ್ದ ಮಿಥುನ್ ಮನೆಯಲ್ಲೇ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತನಗೂ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ.
ಯುವತಿಯ ಪಕ್ಕದ ಮನೆಯಲ್ಲೇ ವಾಸವಾಗಿದ್ದ ಮಿಥುನ್ ಆಕೆಯ ಸಂಬಂಧಿ ಯುವತಿ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಾಗ ಅಲ್ಲಿ ಮಿಥುನ್ ಪರಿಚಯವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಇಷ್ಟಪಟ್ಟು ರಿಲೇಷನ್ಶಿಪ್ನಲ್ಲಿದ್ದರು. ಆದರೆ, ಆತ ಆಕೆಯನ್ನು ಮದುವೆಯಾಗುವ ಬಗ್ಗೆ ಕೇಳಿದಾಗ ಆಕೆ ನಿರಾಕರಿಸಿದ್ದಳು. ತಾನಿನ್ನೂ ಓದಬೇಕೆಂದು ಹೇಳಿದ ಯುವತಿ ಈಗಲೇ ಮದುವೆಯಾಗಲು ಇಷ್ಟವಿಲ್ಲ ಎಂದು ಆತನನ್ನು ಅವಾಯ್ಡ್ ಮಾಡುತ್ತಿದ್ದಳು.

ಫ್ರೆಶ್ ನ್ಯೂಸ್

Latest Posts

Featured Videos