ಪುಂಡ ಪೋಕರಿಗಳ ತಾಣವೀಗ ವಿಹಾರಿಗಳ ಸಸ್ಯಕಾಶಿ

ಯಲಹಂಕ, ಅ. 14: ಉಪನಗರದ ಕುವೆಂಪು ಉದ್ಯಾನ ಅಭಿವೃದ್ಧಿ ಹೊಂದದೆ ಹಾಳುಬಿದ್ದು, ಪುಂಡ ಪೋಕರಿಗಳ ತಾಣವಾಗಿತ್ತು. ಹಿರಿಯ ನಾಗರಿಕರು, ವಕೀಲರು, ಇಂಜಿನಿಯರುಗಳು, ನಿವೃತ್ತ ಅಧಿಕಾರಿಗಳು, ಮಾಜಿ ಶಾಸಕ ಸೇರಿ ಉದ್ಯಾನವನ್ನು ಸಸ್ಯಕಾಶಿಯನ್ನಾಗಿ ಪರಿವರ್ತಿಸಿದ್ದಾರೆ.

ಪ್ರೇರಕ ಶಕ್ತಿ ನಿವೃತ್ತ ಅರಣ್ಯ ಅಧಿಕಾರಿ ಬಿ. ಜಯರಾಂ. ಯಲಹಂಕ ಉಪನಗರ ಒಂದರಲ್ಲೇ 38 ಕ್ಕೂ ಹೆಚ್ಚು ಉದ್ಯಾನಗಳಿದ್ದರೂ, ಎ ಸೆಕ್ಟರ್‌ನಲ್ಲಿರುವ ಉದ್ಯಾನವನ ತನ್ನದೇ ವೈಶಿಷ್ಟ್ಯ ಉಳಿಸಿಕೊಂಡಿದೆ. 1997 ರಲ್ಲಿ ಇಲ್ಲಿನ ಸ್ಥಳೀಯ ನಿವಾಸಿ, ಆಗಿನ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಬಿ. ಜಯರಾಂ ದೂರದೃಷ್ಟಿಯಿಂದ ರಾಷ್ಟ್ರಕವಿ ಕುವೆಂಪು ಉದ್ಯಾನ ನಿರ್ವಣವಾಗಿತ್ತು.

ಇದರ ಕಾಯಕಲ್ಪಕ್ಕೆ ಕೈಜೋಡಿಸಿದವರು ದೇವನಹಳ್ಳಿ ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ, ಬೆಸ್ಕಾಂ ಇಂಜಿನಿಯರ್ ಪ್ರಸಾದ್, ವಕೀಲರಾದ ಸತೀಶ್, ಸ್ಥಳಿಯ ನಿವಾಸಿ ಸೈಯದ್ ಅಸ್ಲಾಂ ಹಾಗೂ ಸ್ಥಳೀಯ ಯುವಕರು ಶಾಸಕ ಎಸ್.ಆರ್.ವಿಶ್ವನಾಥ್ ಪ್ರೊತ್ಸಾಹದೊಂದಿಗೆ ಮರು ನವೀಕರಿಸಲಾಗಿದೆ.  ನಡಿಗೆ ಪಥ, ಸೈಕಲ್ ಪಥ, ಚಿಟ್ಟೆಗಳನ್ನು ಆಕರ್ಷಿಸುವ ಹೂ ಮತ್ತು ಹಣ್ಣಿನ ಗಿಡಗಳನ್ನು ಬೆಳೆಸಲಾಗಿದೆ. ಮಕ್ಕಳಿಗಾಗಿ ವಿಶೇಷ ಆಟದ ಸಾಮಗ್ರಿಗಳಿವೆ.

ವೈವಿಧ್ಯಮಯ ಮರಗಿಡಗಳು

ಸ್ಥಳೀಯ ಪ್ರದೇಶ ಗಳಲ್ಲಿನ ಮರಗಿಡಗಳಲ್ಲದೆ, ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ 65 ಜಾತಿಯ 500 ಕ್ಕೂ ಹೆಚ್ಚು ಔಷಧ, ಹಣ್ಣುಗಳು ಅಲ್ಲದೆ ಪಕ್ಷಿಗಳ ಸಂತಾನೋತ್ಪತ್ತಿಗೆ ಪೂರಕವಾದ ಗಿಡಗಳನ್ನು ಬೆಳೆಸಲಾಗಿದೆ. ಮರಗಳ ಮೇಲೆ ಗಾಂಧಿ ಜಯಂತಿಯಂದು ಸಸ್ಯಶಾಸ್ತ್ರ ತಜ್ಞ  ಡಾ. ಶೃಂಗೇಶ್ ಸೂಚನೆಯ ಮೇರೆಗೆ ಮರಗಳ ವೈಜ್ಞಾನಿಕ ನಾಮಫಲಕಗಳನ್ನು ಬರೆಸಲಾಗಿದೆ.

ವಿವಿಧ ಪ್ರಭೇದದ ಮರಗಳ ಉದ್ಯಾನ ವಿಶೇಷ ಹಲಸು, ನೇರಳೆ, ಮಾವು, ಬೋರೆ, ಸೀಬೆ, ವಾಟೆಹುಳಿ, ಬ್ಯಾಂಡ್ ಕಾಯಿ, ಈಚಲು, ಚಳ್ಳೆಹಣ್ಣು, ಅತ್ತಿಯಂತಹ ಹಣ್ಣಿನ ಮರಗಳು, ಭಗಿನಿ, ಕಾಚು, ಕದಂಬ, ಹೆಬ್ಬೆವು, ಹೊಳೆಮತ್ತಿ, ಹೊಂಗೆ, ಬೇವು, ಟಬೂಬಿಯಾ, ಮಳೆಮರ, ಪಾದ್ರಿಮರ ಹಾಗೂ ಬಿಲ್ವ, ಅರಳಿಮರ, ಸಂಪಿಗೆ, ಭದ್ರಾಕ್ಷಿ, ಮತ್ತು ರಬ್ಬರ್, ಬೂರಗ, ಪನ್ನೆರಳೆ, ಟಕೊಮ, ಬೆಟ್ಟದ ನಲ್ಲಿ, ಬನ್ನಿ, ಅಂಟುವಾಳ, ಕಾಡುಬಾದಾಮಿಯಂತಹ ವಿವಿಧ ಪ್ರಭೇದಗಳ ಮರಗಳನ್ನು ಬೆಳೆಸಿ ಪೋಷಿಸುತ್ತಿರುವುದು ಉದ್ಯಾನದ ವಿಶೇಷ.

ಬಡಾವಣೆಯಲ್ಲಿ ಕುವೆಂಪು ಉದ್ಯಾನವನ ಪ್ರತಿಷ್ಠೆಯ ಪಾರ್ಕ್ ಆಗಿದೆ. ಸಣ್ಣಪುಟ್ಟ ಕಾಮಗಾರಿಗಳು ನಡೆಯಬೇಕಾಗಿದೆ. ಅತಿಶೀಘ್ರದಲ್ಲೇಗುತ್ತಿಗೆ ನೀಡಿ ಮತ್ತಷ್ಟು ಅತ್ಯುತ್ತಮ ಪಾರ್ಕ್ನ್ನಾಗಿ ಮಾಡಲಾಗುವುದು.

ಕುವೆಂಪು ಉದ್ಯಾನದಲ್ಲಿ ನಡೆದರೆ ಕಾಡಿನಲ್ಲಿ ನಡೆದು ಹೋದ ಹಾಗೆ ಅನುಭವ ಉಂಟಾಗುತ್ತದೆ. ಪಾರ್ಕ್ ಆಚೆ ಅಕ್ಕಪಕ್ಕ ಗಿಡಗಳನ್ನು ಬೆಳೆಸಲಾಗುತ್ತಿದೆ. ಜೀವವೈವಿಧ್ಯ ಉದ್ಯಾನವನ ನಿರ್ಮಾಣವೇ ನಮೇಲ್ಲ ದ್ಯೆಯ. ಪಾರ್ಕ್ ಪಕ್ಕ ನಮ್ಮ ಮನೆ ಇದೆ. ಪಾರ್ಕಿನಿಂದ ಇಡೀ ಬಡಾವಣೆ ಹಚ್ಚಹಸಿರು ವಲಯವಾಗಿದೆ. ಯಾವಾಗಲೂ ಪ್ರಶಾಂತ ವಾತಾವರಣ ಇರುತ್ತದೆ.ಇಂತಹ ಪರಿಸರದಲ್ಲಿ ವಾಸವಿರುವುದೇ  ನಮ್ಮ ಸೌಭಾಗ್ಯ.

 

ಫ್ರೆಶ್ ನ್ಯೂಸ್

Latest Posts

Featured Videos