ಅರ್ಧ ಶತಮಾನದ ನಂತರ ಪಕ್ಷೇತರ ಸದಸ್ಯರು ಲೋಕಸಭೆಗೆ!

ಅರ್ಧ ಶತಮಾನದ ನಂತರ ಪಕ್ಷೇತರ ಸದಸ್ಯರು ಲೋಕಸಭೆಗೆ!

ಬೆಂಗಳೂರು, ಮಾ, 23, ನ್ಯೂಸ್ ಎಕ್ಸ್ ಪ್ರೆಸ್: ಹಾಲಿ ಲೋಕಸಭಾ ಚುನಾವಣೆ ಹಲವು ವಿಚಾರಗಳಿಂದಾಗಿ ಭಾರಿ ಸದ್ದು ಮಾಡುತ್ತಿದ್ದು, ಈ ಪೈಕಿ ನಟರಾದ ಸಮಲತಾ ಅಂಬರೀಶ್ ಹಾಗೂ ನಟ ಪ್ರಕಾಶ್ ರೈ ಅವರ ಸ್ಪರ್ಧೆ ಕೂಡ ಪ್ರಮುಖವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಕಣಕ್ಕಿಳಿದಿದ್ದರೆ, ಇನ್ನೊಂದೆಡೆ ಪ್ರಕಾಶ್ ರೈ ಬೆಂಗಳೂರು ಕೇಂದ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಕಾಶ್ ರೈ ಅಥವಾ ಸುಮಲತಾ ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ 52 ವರ್ಷಗಳ ನಂತರ ಪಕ್ಷೇತರ ಅಭ್ಯರ್ಥಿಯೊಬ್ಬರು ರಾಜ್ಯದಿಂದ ಸಂಸತ್ ​ಗೆ ಪ್ರವೇಶಿಸಿದಂತಾಗುತ್ತದೆ. 1967ರ ನಂತರ ರಾಜ್ಯದ ಯಾವುದೇ ಭಾಗದಿಂದಲೂ ಆಯ್ಕೆಯಾಗಿಲ್ಲ. ಇದೀಗ ಮಂಡ್ಯ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಂದ ಪಕ್ಷೇತರರು ಆರಿಸಿ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಇತಿಹಾಸ ನಿರ್ಮಾಣವಾಗುವುದಂತೂ ಖಂಡಿತ!

ಫ್ರೆಶ್ ನ್ಯೂಸ್

Latest Posts

Featured Videos