ಬೆಂಗಳೂರು, ಜು, 26: ಇಂದಿನಿಂದ 28 ರವರೆಗೆ 3 ದಿನಗಳ ರಾಜ್ಯ ಮಟ್ಟದ ನೋಟು ಮತ್ತು ನಾಣ್ಯಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.
ಕೆಂಪೇಗೌಡ ರಸ್ತೆಯ ಶಿಕ್ಷಕರ ಸದನದಲ್ಲಿ “ನಾಣ್ಯ ದರ್ಶಿನಿ ” ಹೆಸರಿನಡಿ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ರಾಜ್ಯ ನೋಟು, ನಾಣ್ಯಗಳ ಸಂಗ್ರಹಕಾರರ ಪ್ರಧಾನ ಸಂಸ್ಥೆ ಕರ್ನಾಟಕ ನಾಣ್ಯ ಸಂಘ ಆಯೋಜನೆ ಮಾಡಿದೆ.
ಪ್ರಾಚಿನ ಭಾರತದ ಅಪರೂಪದ ನಾಣ್ಯಗಳು ವಿಶೇಷ ಗಮನ ಸೆಳೆಯಲಿದ್ದು, ದೇಶ ವಿದೇಶಗಳ ಅಪರೂಪ ಹಾಗೂ ಚಾರಿತ್ರಿಕ, ಪರಂಪರೆ ಬಿಂಭಿಸುವ ಕರೆನ್ಸಿ ಮತ್ತು ಕಾಯಿನ್ ಗಳು “ನಾಣ್ಯಪ್ರದಶಿನಿ”ಯಲ್ಲಿ ಪ್ರದರ್ಶನಕ್ಕಿಡಲಾಗಿದೆ.
ದೇಶದ ಅನೇಕ ರಾಜ್ಯಗಳ ನಾಣ್ಯ ಮತ್ತು ನೋಟು ಸಂಗ್ರಹಕರು ಮತ್ತು ಮಾರಾಟಗಾರರು ಭಾಗವಹಿಸುವರು. ಒಂದೇ ವೇದಿಕೆಯಲ್ಲಿ ವಿಭಿನ್ನ ನಾಣ್ಯ ಮತ್ತು ನೋಟುಗಳನ್ನು ಪ್ರದರ್ಶನ ಮಾಡಲಿದ್ದು, ಹವ್ಯಾಸಿ ಸಂಗ್ರಹಕರಿಗೂ ಅವಕಾಶನೀಡಲಾಗಿದೆ.
ಆಸಕ್ತರು ನಾಣ್ಯ ಮತ್ತು ನೋಟುಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಅವಕಾಶ ಇದ್ದು, ಕರ್ನಾಟಕ ನ್ಯೂಮಿಸ್ಮಾಟಿಕ್ ಸೊಸೈಟಿ ಅದ್ಯಕ್ಷ ಕೀರ್ತಿ ಎಸ್ .ಫರೇಖ್ ಮತ್ತು ಪ್ರಧಾನ ಕಾರ್ಯದರ್ಶಿ ಸುರೇಶ್ ತಿಳಿಸಿದ್ದಾರೆ.