ಪುಂಡರಿಗೆ ಖಾಕಿ ವಾರ್ನಿಂಗ್ !

ಪುಂಡರಿಗೆ ಖಾಕಿ ವಾರ್ನಿಂಗ್ !

ಬೆಂಗಳೂರು, ಮೇ. 17, ನ್ಯೂಸ್ ಎಕ್ಸ್ ಪ್ರೆಸ್: ರಸ್ತೆ ಬದಿಯಲ್ಲಿ ಸಿಗರೇಟ್ , ಮದ್ಯ ಸೇವಿಸುವ ಪುಂಡ ಪೋಕಕರಿಗೆ ನಗರದ ಉತ್ತರ ವಿಭಾಗದ ಪೊಲೀಸರು ರಾತ್ರೋರಾತ್ರಿ ಖಡಕ್ ವಾರ್ನಿಂಗ್  ನೀಡಿದ್ದಾರೆ. ರಸ್ತೆ ಬದಿಯಲ್ಲಿ  ಗುಂಪಾಗಿ ನಿಂತು ಹೆಣ್ಣು ಮಕ್ಕಳನ್ನು ರೇಗಿಸುವ ವ್ಯಕ್ತಿಗಳನ್ನು ಕರೆಸಿ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಎಚ್ಚರಿಕೆ ನೀಡಿದ್ದಾರೆ. ಡಿಸಿಪಿ ಶಶಿಕುಮಾರ್ ಅವರ ಜೊತೆ ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಧನಂಜಯ್ ಹಾಗೂ ಇನ್ಸ್ ಪೆಕ್ಟರ್ ಭಾಗಿಯಾಗಿದ್ದರು.ಪೊಲೀಸರು ಪುಂಡರನ್ನು ಓಕಳಿಪುರದ ಕಲ್ಯಾಣ ಮಂಟಪವೊಂದಕ್ಕೆ ಕರೆಸಿ ಬುದ್ಧಿವಾದ ಹೇಳಿದ ನಂತರ ಗುರುತಿನ ಚೀಟಿ ಪಡೆದು ಅಪರಾಧ ಕೃತ್ಯದಲ್ಲಿ ತೊಡಗದಂತೆ ಎಚ್ಚರಿಕೆ ನೀಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos