ಪೊಲೀಸ್ ಠಾಣೆ ಮೆಟ್ಟಿಲೇರಿದ ವರ

  • In State
  • November 22, 2019
  • 257 Views
ಪೊಲೀಸ್ ಠಾಣೆ ಮೆಟ್ಟಿಲೇರಿದ ವರ

ರಾಮನಗರ,ನ.22: ರಾಮನಗರದ ಎಲೆಕೇರಿ ಬಡಾವಣೆಯ ಎಲೀಯೂರು ಗ್ರಾಮದಲ್ಲಿ ಆರತಕ್ಷತೆಗೂ ಮುನ್ನವೇ ಮದುವೆಯೊಂದು ಅನಾಮಧೇಯ ಫೋನ್ ಕರೆಯಿಂದ  ಮುರಿದು ಬಿದ್ದಿದೆ.

ಬಸವರಾಜುರವರಿಗೆ(ವರ) ಆರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿ ಮದುವೆ ನಿಶ್ಚಯ ಮಾಡಲಾಗಿತ್ತು. ಅಂದು ಕೊಂಡಂತೆ ಇಂದು ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ಮದುವೆ ನಡೆಯಬೇಕಿತ್ತು , ಆದರೆ ಸಾಯಂಕಾಲ ಆರತಕ್ಷತೆಗೂ ಮುನ್ನವೇ ವಧುವಿನ ಸಂಬಂಧಿಕರಿಗೆ ಅಪರಿಚಿತ ವ್ಯಕ್ತಿ ಫೋನ್ ಕರೆಯಲ್ಲ್ಲಿ ವರನಿಗೆ ಮೊದಲೇ ಮದುವೆಯಾಗಿ ಮಕ್ಕಳು ಇವೆ ಎಂದು ಹೇಳಿದ್ದಾರೆ. ಅನುಮಾನಗೊಂಡ ವಧುವಿನ ಕುಟುಂಬಸ್ಥರು ಆರತಕ್ಷತೆಗೂ ಮುನ್ನವೇ ಮದುವೆಯನ್ನು ನಿಲ್ಲಿಸಿದ್ದಾರೆ. ಅದೇ ವಧುವಿಗೆ ಬೇರೆ ಹುಡುಗನ ಜೊತೆ ಮದುವೆ ಮಾಡಲು ತೀರ್ಮಾನಿಸಿದ್ದಾರೆ. ಗಾಬರಿಗೊಂಡ ವರ ಬಸವರಾಜು ಆರೋಪ ಸಾಬೀತು ಮಾಡುವಂತೆ ಪಟ್ಟುಹಿಡಿದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಕೊನೆಗೆ ಮದುವೆಗೆ ಒಪ್ಪದ ವಧುವಿನ ಕಡೆಯವರು ತಮ್ಮ ಮಗಳಿಗೆ ಬೇರೆ ಮದುವೆ ಮಾಡಲು ತೀರ್ಮಾನಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos