ಬೆಂಗಳೂರು: ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಇಂದು ಗುರುವಾರ ಬೆಳಗ್ಗೆ 10.30 ಕ್ಕೆ ಮೆಜೆಸ್ಟಿಕ್ ಪಕ್ಕದಲ್ಲಿರುವ ಗಾಂಧಿನಗರದಲ್ಲಿನ ಸರಸ್ವತಿ ಲಾಡ್ಜ್ ನಲ್ಲಿದ್ದ 48 ರೂಮುಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು ಎರಡು ಕೋಟಿ ಹಲವಾರು ಹಣ ಸಿಕ್ಕಿದೆ ಎನ್ನುವ ಮಾಹಿತಿದೊರಕಿದೆ. ಪೊಲೀಸರು ಸುಮಾರು ಒಂದು ಗಂಟೆ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವಿಚಾರವಾಗಿ ಏನು ನಡೆದಿಲ್ಲ ಎಂದು ಪೊಲೀಸರು ಕೈ ಚೆಲ್ಲಿದ್ದಾರೆ. ಆದಾಗ್ಯೂ ಪೊಲೀಸರು ಬಂದು ಪರಿಶೀಲನೆ ನಡೆಸಿರುವ ದೃಶ್ಯ ಲಭ್ಯವಾಗಿದೆ.
ಇನ್ನು ಪೊಲೀಸರು ಬಂದಿದ್ದ ವಿಚಾರವನ್ನು ಲಾಡ್ಜ್ ಮಾಲೀಕ ಸಹ ಒಪ್ಪಿಕೊಂಡಿದ್ದಾರೆ. ಈ ವಿಚಾರವಾಗಿ ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಯಾವ ದೂರು ಕೂಡ ದಾಖಲಾಗಿಲ್ಲ. ಪೊಲೀಸರಿಂದ ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಈ ವಿಷಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ರೀತಿ ಏಕಾಏಕಿ ಪೊಲೀಸರು ಲಾಡ್ಜ್ ಗಳ ಮೇಲೆ ದಾಳಿ ಮಾಡುವುದರಿಂದ ನಮ್ಮ ವ್ಯವಹಾರಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ. ಇಂತಹ ಅನುಮಾನ ಬಂದಲ್ಲಿ ಲಾಡ್ಜ್ ಮಾಲೀಕರಾದ ನಮಗೆ ಪೊಲೀಸರು ತಿಳಿಸಿದರೆ ಇಂತಹ ಕಾರ್ಯಕ್ಕೆ ನಾವು ಕೂಡ ಸಪೋರ್ಟ್ ಮಾಡುತ್ತೇವೆ. ಏಕಾಏಕಿದಾಳೆ ಮಾಡುವುದರಿಂದ ನಮ್ಮ ಲಾಡ್ಜ್ ಗೆ ಕೆಟ್ಟ ಹೆಸರು ಬರುತ್ತದೆ. ನಮಗೆ ತಿಳಿಸಿ ಬರುವುದು ಸೂಕ್ತ ಎಂದು ಅವರು ತಿಳಿಸಿದರು.
ವರದಿಗಾರ
ಎ ಚಿದಾನಂದ