ಪೊಲೀಸ್ ಪೇದೆಯ ಬೈಕ್ ಗೆ ಬೆಂಕಿ

ಪೊಲೀಸ್ ಪೇದೆಯ ಬೈಕ್ ಗೆ ಬೆಂಕಿ

ಚಿಕ್ಕಬಳ್ಳಾಪುರ, ಅ. 16 : ಹಳೇ ದ್ವೇಷದ ಹಿನ್ನೆಲೆ ಪೊಲೀಸ್ ಪೇದೆಯೊರ್ವರ ಬೈಕ್ ಗೆ ಬೆಂಕಿ ಹಚ್ಚಿದ ಕೀಡಿಗೇಡಿಗಳು ಸಿಕ್ಕಿಬಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಗ್ರಾಮದಲ್ಲಿ ನಡೆದಿದೆ. ಗುಡಿಬಂಡೆ ಪಟ್ಟಣದ 1 ನೇ ವಾರ್ಡ್ ಇಂದಿರಾನಗರ ನಿವಾಸಿಗಳಾದ ಆರೋಪಿಗಳು ಉಮೇಶ್ ಮತ್ತು ವೆಂಕಟೇಶ್ ಸೇರಿ ಪೊಲೀಸ್ ಪೇದೆ ನಾಗೇಶ್ ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟು ಸಿಕ್ಕಿ ಬಿದ್ದಿದ್ದಾರೆ. ಗುಡಿಬಂಡೆ ಪಟ್ಟಣದ ಶ್ರೀ ಅರವಿಂದ ಅನುದಾನಿತ ಪ್ರೌಢಶಾಲೆ ಬಳಿಯ ಹಳೇಗುಡಿಬಂಡೆ ರೈತ ಚಂದ್ರಶೇಖರ ರೆಡ್ಡಿಗೆ ಸೇರಿದ ನರ್ಸರಿ ಮತ್ತು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು ಬೈಕ್ ಗೆ ಬೆಂಕಿ ಇಟ್ಟ ನಂತರ ಬೆಂಕಿಯನ್ನು ತಾವೇ ಆರಿಸಲು ಮುಂದಾಗಿ ಅಸಾಮಿಗಳು ಸಿಕ್ಕಿಬಿದ್ದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos