ಅಮಾಯಕರ ಮೊಬೈಕ್, ಗಾಡಿ ಬೀಗ ಕಿತ್ತುಕೊಳ್ಳುವ ಪೊಲೀಸಪ್ಪ!

ಅಮಾಯಕರ ಮೊಬೈಕ್, ಗಾಡಿ ಬೀಗ ಕಿತ್ತುಕೊಳ್ಳುವ ಪೊಲೀಸಪ್ಪ!

ಬಳ್ಳಾರಿ, ಏ. 26, ನ್ಯೂಸ್ ಎಕ್ಸ್ ಪ್ರೆಸ್ :  ಅಮಾಯಕ ಜನರನ್ನು ಮತ್ತು ಅನಕ್ಷರಸ್ಥರನ್ನು ನೋಡಿ ಟಾರ್ಗೆಟ್ ಮಾಡಿ, ಭಯ ಪಡಿಸಿ, ಮೊಬೈಕ್ ಮತ್ತು ಗಾಡಿ ಬೀಗ ಕಸಿದುಕೊಳ್ಳುವುದು ಈ ಪೊಲೀಸಪ್ಪನ ಡ್ಯುಟಿಯಾಗಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪೊಲೀಸ್ ಠಾಣೆಯ ಪೇದೆಯೋರ್ವರು ಸುಖಾಸುಮ್ಮನೆ ಜನರಿಂದ ಹಣ ವಸೂಲಿ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಡಿಯೋ ಒಂದು ವೈರಲ್​ ಆಗಿದೆ. ತನಿಖೆ ಮಾಡುವ ನೆಪದಲ್ಲಿ ದಾಖಲಾತಿಗಳನ್ನು ಪರಿಶೀಲಿಸುತ್ತಾ, ಸರಿ ಇದ್ದರೂ ಸಹ ಅಮಾಯಕ ಜನರನ್ನು ಮತ್ತು ಅನಕ್ಷರಸ್ಥರನ್ನು ನೋಡಿ ಟಾರ್ಗೆಟ್ ಮಾಡಿ, ಭಯ ಪಡಿಸಿ, ಮೊಬೈಕ್ ಮತ್ತು ಗಾಡಿ ಬೀಗ ಕಸಿದುಕೊಳ್ಳುವುದು ಈ ಪೊಲೀಸಪ್ಪನ ಡ್ಯುಟಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಪೇದೆಯ ಕಾಟದಿಂದ ಕೂಡ್ಲಿಗಿ ಪಟ್ಟಣದಲ್ಲಿ ಜನರು ರೋಸಿ ಹೋಗಿದ್ದಾರಂತೆ. ಸಾರ್ವಜನಿಕರ ಜತೆ ಅಸಭ್ಯವಾಗಿ ಮಾತನಾಡಿ, ಧಮಕಿ ಹಾಕುತ್ತಾರೆ ಎಂಬ ಗಂಭೀರ ಆರೋಪ ಸ್ಥಳೀಯರದು.

ಫ್ರೆಶ್ ನ್ಯೂಸ್

Latest Posts

Featured Videos