ಪೋಲಿ ಹುಡುಗನಿಗೆ ಧರ್ಮದೇಟು

ಪೋಲಿ ಹುಡುಗನಿಗೆ ಧರ್ಮದೇಟು

ಉತ್ತರ ಪ್ರದೇಶದ, ಆ. 27: ದಾರಿ ಮಧ್ಯೆ ಆಕೆ ಕುರ್ತಾ ಹರಿದ ವ್ಯಕ್ತಿಗೆ ಮನಬಂದಂತೆ ಥಳಿಸಿದ್ದಾಳೆ. ಉತ್ತರ ಪ್ರದೇಶದ ಮೊರಾದಾಬಾದ್ ನ ಮಂಚಾಲ್ ಪ್ರದೇಶದಲ್ಲಿ ವಿದ್ಯಾರ್ಥಿನಿಯೊಬ್ಬಳು ಪೋಲಿ ಹುಡುಗನಿಗೆ ಬುದ್ದಿ ಕಲಿಸಿದ್ದಾಳೆ. ಆಕೆ ಜೊತೆ ಕೈ ಜೋಡಿಸಿದ ಸ್ಥಳೀಯರು ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾರೆ.
ವಿದ್ಯಾರ್ಥಿನಿ ಪ್ರತಿದಿನ ಟ್ಯೂಷನ್ ಗೆ ಹೋಗ್ತಿದ್ದಳಂತೆ. ಆಕೆಯನ್ನು ಪ್ರತಿ ದಿನ ಈತ ಹಿಂಬಾಲಿಸುತ್ತಿದ್ದನಂತೆ. ಸೋಮವಾರ ಹಿಂಬಾಲಿಸಿ ಬಂದ ವ್ಯಕ್ತಿ ಆಕೆ ಬಟ್ಟೆ ಎಳೆದಿದ್ದಾನೆ. ಹುಡುಗಿ ಕುರ್ತಾ ಹರಿದಿದೆ. ಹುಡುಗಿ ಕಿರುಚಿಕೊಂಡಿದ್ದಾಳೆ. ತಕ್ಷಣ ಸುತ್ತಮುತ್ತಲಿದ್ದ ಜನರು ರಕ್ಷಣೆಗೆ ಬಂದಿದ್ದಾರೆ.
ವಿದ್ಯಾರ್ಥಿನಿ ಆರೋಪ ಕೇಳಿದ ಸ್ಥಳೀಯರು ವ್ಯಕ್ತಿಗೆ ಎರಡೆರಡೇಟು ನೀಡಿದ್ದಾರೆ. ಅಲ್ಲಿದ್ದವರ್ಯಾರೋ ವಿಡಿಯೋ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos