ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಖಾತೆಯಿಲ್ಲದಿದ್ದರೂ ‘ಸುವಿಧಾ ಕಾರ್ಡ್’

ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಖಾತೆಯಿಲ್ಲದಿದ್ದರೂ ‘ಸುವಿಧಾ ಕಾರ್ಡ್’

ಬೆಂಗಳೂರು, ಏ. 8, ನ್ಯೂಸ್ ಎಕ್ಸ್ ಪ್ರೆಸ್: ಬ್ಯಾಂಕುಗಳಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಮಾತ್ರ ಎಟಿಎಂ ಕಾರ್ಡ್ ನೀಡುವುದು ನಿಯಮ. ಆದರೆ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡಲು ಮುಂದಾಗಿದ್ದು, ಪಿಎನ್ಬಿ ಬ್ಯಾಂಕ್ ನಲ್ಲಿ ಖಾತೆ ಇಲ್ಲದಿದ್ದರೂ ಎಟಿಎಂ ಕಾರ್ಡ್ ನೀಡಲಿದೆ. ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಿಪೇಡ್ ಎಟಿಎಂ ಕಾರ್ಡ್ ನೀಡುತ್ತಿದ್ದು, ಈ ಕಾರ್ಡ್ ದಾರರು ಮೊದಲು ರೀಚಾರ್ಜ್ ಮಾಡಿ ನಂತರ ಬಳಸಬೇಕು. ಇದಕ್ಕಾಗಿ ಪಿಎನ್ಬಿ ಬ್ಯಾಂಕ್ ನಲ್ಲಿ ಖಾತೆ ಹೊಂದಿರಬೇಕಾಗಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದಕ್ಕೆ ಪಿ.ಎನ್.ಬಿ. ಸುವಿಧಾ ಕಾರ್ಡ್ ಎಂದು ಹೆಸರಿಸಿದೆ. ಸುವಿಧಾ ಎಟಿಎಂ ಕಾರ್ಡ್ ನಿಜ. ಆದರೆ ಅದರಲ್ಲಿರುವ ಮೊತ್ತವನ್ನು ಕಾರ್ಡುದಾರರೇ ನಿರ್ಧರಿಸಬೇಕು. ಕಾರ್ಡುದಾರರು ತಮಗೆ ಬೇಕಾದಷ್ಟು ಮೊತ್ತವನ್ನು ಬ್ಯಾಂಕ್ ಖಾತೆಯಿಂದ ಸುವಿಧಾ ಕಾರ್ಡ್ ಗೆ ವರ್ಗಾವಣೆ ಮಾಡಿಕೊಳ್ಳಬೇಕು. ನಂತರ ಕಾರ್ಡ್ ಬಳಕೆ ಮಾಡಬಹುದು. ಈ ಪ್ರಿಪೇಡ್ ಕಾರ್ಡ್ ಗೆ ರೂ. 500 – 50,000 ವರೆಗೆ ರೀಚಾರ್ಜ್ ಮಾಡಲು ಅವಕಾಶವಿದೆ. ಸುವಿಧಾ ಕಾರ್ಡ್ ಮೂರು ವರ್ಷಗಳ ವ್ಯಾಲಿಡಿಟಿ ಹೊಂದಿದೆ. ಮಾರುಕಟ್ಟೆಯಲ್ಲಿ, ಸ್ವೈಪ್ ಮಷಿನ್ ಗಳಲ್ಲಿ ಇದನ್ನು ಬಳಸಬಹುದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos