ಬೀದರ್, ಮಾ.23, ನ್ಯೂಸ್ ಎಕ್ಸ್ ಪ್ರೆಸ್: ಪ್ರಧಾನಿ ನರೇಂದ್ರ ಮೋದಿ ಜೀವನಾದಾರಿತ ಚಿತ್ರ ಬಿಡುಗಡೆ ಮಾಡದಂತೆ ವಿಶ್ವ ಮಾನವ ಬಂಧುತ್ವ ವೇದಿಕೆ, ದಲಿತ ಸೇನೆ ಮನವಿ ಸಲ್ಲಿಸಿವೆ.
ಜಿಲ್ಲೆಯ ಹುಮ್ನಾಬಾದ್ ತಹಿಶೀಲ್ದಾರ್ ಮೂಲಕ ಚುನಾವಣಾ ಆಯೋಗಕ್ಕೆ ಸಂಘಟನೆಗಳು ಮನವಿಸಲ್ಲಿಸಿವೆ. ಮನವಿ ಪತ್ರದಲ್ಲಿ, ಚುನಾವಣಾ ನೀತಿ ಸಂಹಿತೆ ಜಾರಿ ಇದೆ.
ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡಿದ್ರೆ ಅದು ಜನರ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸಿನಿಮಾ ಬಿಡುಗಡೆ ಮಾಡಲಿ ಅನುಮತಿ ನೀಡಬಾರದು. ಒಂದು ವೇಳೆ ಸಿನೆಮಾ ರಿಲೀಸ್ ಮಾಡಿದ್ದೆ ಆದಲ್ಲಿ ಉಗ್ರ ಹೋರಾಟ ಮಾಡುವದಾಗಿ ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಏಪ್ರೀಲ್ 5ಕ್ಕೆ ಪಿಎಂ ನರೇಂದ್ರ ಮೋದಿ ಸಿನೆಮಾ ರಿಲೀಸ್ ಆಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. ಈ ಚಿತ್ರದಲ್ಲಿ ಬೆಂಗಳೂರಿನ ಅಳಿಯ ವಿವೇಕ್ ಓಬೇರಾಯ್ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರ ಮಾಡಿದ್ರೆ, ಮೇರಿ ಕೋಮ್ ಮುಂತಾದ ಹಿಟ್ ಚಿತ್ರ ನೀಡಿದ್ದ ನಿರ್ದೇಶಕ ಓಮಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.