ಪ್ಲಾಟ್ಫಾರಂ ನಡುವೆ ಸಿಲುಕಿ ಪಾರಾದ ಪ್ರಯಾಣಿಕ

ಹೈದರಾಬಾದ, ಆ.31 : ಚಲಿಸುತ್ತಿರುವ ರೈಲು, ಪ್ಲಾಟ್ಫಾರಂ ನಡುವೆ ಸಿಲುಕಿಕೊಂಡಿದ್ದ ಪ್ರಯಾಣಿಕನನ್ನು ರಕ್ಷಿಸಿದ ರೈಲ್ವೇ ಪೊಲೀಸ್ ಸಿಬ್ಬಂದಿಯ ಸಾಹಸಕ್ಕೆ ನೆಟ್ಟಿಗ ಸಮುದಾಯ ಮೆಚ್ಚಿಕೊಂಡಿದೆ.
ಹೈದರಾಬಾದ್ ನಿಲ್ದಾಣದಲ್ಲಿ ವೆಂಕಟ್ ರೆಡ್ಡಿ ಎಂಬ ವ್ಯಕ್ತಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ವೇಳೆ ಪ್ಲಾಟ್ಫಾರಂ ಹಾಗೂ ರೈಲಿನ ನಡುವೆ ಸಿಲುಕಿಕೊಂಡಿದ್ದಾರೆ.
ಈ ಸಂದರ್ಭ ಅಲ್ಲಿದ್ದ RPF ಪೇದೆ ವಿಕುಲ್ ಕುಮಾರ್ ಸಮಯಪ್ರಜ್ಞೆ ಮೆರೆದು, ಪ್ಲಾಟ್ಫಾರಂ ಹಾಗೂ ರೈಲಿನ ನಡುವಿನ ಸಂದಿಯ ಮೂಲಕ ಪ್ರಯಾಣಿಕನ ಕಾಲು ಹೊರತೆಗೆದು ಆತನ ಜೀವ ಉಳಿಸಿದ್ದಾರೆ. ಈ ಘಟನೆಯ CC TV ವಿಡಿಯೋವನ್ನ ರೈಲ್ವೇ ಇಲಾಖೆ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos