ಭುವನೇಶ್ವರ್, ಮೇ. 15, ನ್ಯೂಸ್ ಎಕ್ಸ್ ಪ್ರೆಸ್: 2 ವಾರದ ಹಿಂದೆ ಎಂಟ್ರಿ ಕೊಟ್ಟಿರುವ ‘ಫಣಿ’ ಚಂಡಮಾರುತದ ಆರ್ಭಟ ಇನ್ನೂ ಕಮ್ಮಿಯಾಗಿಲ್ಲ. ಒಡಿಶಾದಲ್ಲಿ ಬಾಲುಖಂಡ್-ಕೋನಾರ್ಕ್ ಅರಣ್ಯ ವಲಯದಲ್ಲಿ 4 ಸಾವಿರಕ್ಕೂ ಹೆಚ್ಚು ಜಿಂಕೆಗಳು ಸೈಕ್ಲೋನ್ ಸಮಯದಲ್ಲಿ ನಾಪತ್ತೆಯಾಗಿದೆ. ಇದೀಗ ಚಂಡಮಾರುತ ಅಬ್ಬರ ಸ್ವಲ್ಪಮಟ್ಟಿಗೆ ಕಡಿಮೆ ಆಗಿದೆ.ಆದ್ರೂ ಕೂಡಾ ಜಿಂಕೆಗಳು ಮಾತ್ರ ಪತ್ತಯಾಗ್ತಿಲ್ಲ ಅನ್ನೋದು ಒಡಿಶಾ ಸರ್ಕಾರವನ್ನು ಕಳವಳಕ್ಕೀಡುಮಾಡಿದೆ. ಹೀಗಾಗಿ ಡ್ರೋಣ್ ಕ್ಯಾಮೆರಾ ಬಳಸಿ ನಾಪತ್ತೆಯಾದ ಜಿಂಕೆಗಳನ್ನು ಪತ್ತೆ ಹಚ್ಚಲು ಒಡಿಶಾ ಸರ್ಕಾರ ನಿರ್ಧರಿಸಿದೆ.
‘ಡ್ರೋಣ್ ‘ ಮೂಲಕ ಜಿಂಕೆಗಳ ಹುಡುಕಾಟ’
ಬಾಲುಖಂಡ್-ಕೋನಾರ್ಕ್ ಅರಣ್ಯ ವಲಯದ ಪ್ರಧಾನ ಸಂರಕ್ಷಣಾಧಿಕಾರಿ ಎ.ಕೆ.ಮೊಹಪಾತ್ರಾ ಪ್ರತಿಕ್ರಿಯಿಸಿ, ಹುಡುಕಾಟ ನಡೆಸಿದ ನಮಗೆ ಒಂದು ಜಿಂಕೆಯ ಮೃತದೇಹ ಮಾತ್ರ ಸಿಕ್ಕಿದೆ. ಸಾಮಾನ್ಯವಾಗಿ ಜಿಂಕೆಗಳು ಆಹಾರ ಹುಡುಕುತ್ತಾ ರಾತ್ರಿ ವೇಳೆ ತಮ್ಮ ಅಡಗುತಾಣಗಳಿಂದ ಹೊರಗೆ ಬರುತ್ತವೆ. ಅಧಿಕಾರಿಗಳು ಹಗಲಿನ ವೇಳೆ ಹುಡುಕಾಟ ನಡೆಸಿದ್ದಾರೆ. ಹೀಗಾಗಿ ನಮಗೆ ಸರಿಯಾದ ಸುಳಿವು ಸಿಕ್ಕಿಲ್ಲ. ಡ್ರೋಣ್ ಕ್ಯಾಮೆರಾ ಬಳಸುವುದಿರಂದ ಜಿಂಕೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.