ಸಾಕು ನಾಯಿ ನೆಕ್ಕಿ ವ್ಯಕ್ತಿ ಸಾವು…!

ಸಾಕು ನಾಯಿ ನೆಕ್ಕಿ ವ್ಯಕ್ತಿ ಸಾವು…!

ನ.24 : 63 ವರ್ಷದ ಆ ವ್ಯಕ್ತಿ ಆರೋಗ್ಯವಾಗಿಯೇ ಇದ್ದರು. ಇದ್ದಕ್ಕಿದ್ದಂತೆಯೇ ಇವರು ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ತಪಾಸಣೆ ನಡೆಸಿದ ವೈದ್ಯರಿಗೂ ಮೊದಲು ಸಮಸ್ಯೆ ಏನೆಂದು ಪತ್ತೆ ಹಚ್ಚುವುದು ಕಷ್ಟವಾಗಿತ್ತು. ಆದರೆ, ಸೂಕ್ಷ್ಮ ತಪಾಸಣೆ ನಡೆಸಿದಾಗ ಗೊತ್ತಾಗಿದ್ದು ಆತಂಕಕಾರಿ ಸಂಗತಿ. ಅದೇನೆಂದರೆ, ಈ ವ್ಯಕ್ತಿ ಕ್ಯಾಪ್ನೋಸೈಟೋಫಾಗಾ ಬ್ಯಾಕ್ಟೀರಿಯಾದ ಸೋಂಕಿಗೊಳಗಾಗಿದ್ದರು. ಈ ಬ್ಯಾಕ್ಟೀರಿಯಾ ಹೆಚ್ಚಾಗಿ ನಾಯಿ ಮತ್ತು ಬೆಕ್ಕುಗಳ ಲಾಲಾರಸದಲ್ಲಿ ಕಂಡು ಬರುತ್ತದೆ. ಆದರೆ, ಈ ಸೋಂಕು ಮನುಷ್ಯರಿಗೆ ತಗುಲುವುದು ಅತೀ ವಿರಳಾತಿ ವಿರಳವಂತೆ. ಬಳಿಕ ಇವರ ಒಂದೊಂದೇ ಅಂಗಾಂಗಗಳು ವೈಫಲ್ಯಗೊಂಡವು. ಕೊನೆಗೆ ಇವರು ಬ್ರೈನ್ ಡ್ಯಾಮೇಜಿಗೂ ತುತ್ತಾದರು. ಹೀಗೆ ಸುಮಾರು ನಾಲ್ಕು ದಿನಗಳ ಚಿಕಿತ್ಸೆ ತೆಗೆದುಕೊಂಡ ಬಳಿಕ ವೈದ್ಯರಿಗೆ ಇವರ ಅನಾರೋಗ್ಯದ ಸ್ಪಷ್ಟ ಕಾರಣ ಗೊತ್ತಾಗಿತ್ತು. ಇಷ್ಟಕ್ಕೆಲ್ಲಾ ಕ್ಯಾಪ್ನೋಸೈಟೋಫಾಗಾ ಬ್ಯಾಕ್ಟೀರಿಯಾವೇ ಕಾರಣ ಎಂಬುದನ್ನು ವೈದ್ಯರು ಮನಗಂಡಿದ್ದರು. ಬಳಿಕ ಇದಕ್ಕೆ ಬೇಕಾದ ಚಿಕಿತ್ಸೆ ಕೂಡಾ ನಡೆಯುತ್ತಿತ್ತು. ಇದಾಗಿ 16 ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಈ ವ್ಯಕ್ತಿ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos