ಬೇಲೂರು: ಕೊರೋನಾ ರೋಗದ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ಕ್ರಮ ಅನುಸರಿಸದೆ ಮನವಸೋ ಇಚ್ಛೆ ವರ್ತಿಸುತ್ತಿರುವುದರಿಂದ ಸಮುದಾಯದ ಮೂಲಕ ರೋಗ ಹರಡುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ನಂತರ ಆಸ್ಪತ್ರೆ ವೀಕ್ಷಿಸಿ ಮಾತನಾಡಿದ ಅವರು, ದಿನಕಳೆದಂತೆ ಸೋಂಕು ಉಲ್ಭಣಗೊಳ್ಳುತ್ತಿದೆ. ಯಾರಿಂದ ಎಲ್ಲಿ ಹರಡುತ್ತಿದೆ ಎಂಬುದೆ ತಿಳಿಯುತ್ತಿಲ್ಲ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವುದರಿಂದ ಅಲ್ಪ ಪ್ರಮಾಣದಲ್ಲಿ ಹತೋಟಿಗೆ ಬರಲಿದೆ ಆದರೆ ಜನರು ಇದರ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ತಮ್ಮ ಮನೆಗೆ ಬಂದಾಗ ಎಚ್ಚೆತ್ತುಕೊಂಡು ನೋವು ಅನುಭವಿಸುವ ಬದಲು ಮುಂಜಾಗೃತೆ ಕ್ರಮ ಕೈಗೊಳ್ಳುವುದು ಒಳ್ಳೆಯದೆಂದರು.
ತಾ.ಕೇಂದ್ರಗಳಲ್ಲಿ ೫೦ ಹಾಸಿಗೆಗಳ ಕೇಂದ್ರ ಆರಂಭಿಸಲಾಗಿದ್ದು ಇದೆ ಪ್ರಮಾಣದಲ್ಲಿ ಆಕ್ಸಿಜನ್ ಇರಲಿದೆ. ತಾ.ಕೇಂದ್ರದಲ್ಲಿ ೨೪೦೦ ಪರೀಕ್ಷೆ ಮಾಡಬೇಕೆಂದು ಸೂಚಿಸಲಾಗಿದೆ. ೧೪೦೦ ವಿಸಿಆರ್ ಪರೀಕ್ಷೆ ಹಾಗೂ ರ‍್ಯಾಪಿಡ್ ಪರೀಕ್ಷೆ ಮಾಡುವಂತೆ ಆದೇಶಿಸಲಾಗಿದೆ. ಇದರಿಂದ ಪಾಸಿಟಿವ್ ಬಂದ ವ್ಯಕ್ತಿ ಬೇರೆಯವರ ಜೊತೆ ಸಂಪರ್ಕ ಹೊಂದಬಾರದೆಂಬುದಾಗಿದೆ ಎಂದು ತಿಳಿಸಿದರು.
ಡಿಹೆಚ್‌ಒ ಡಾ.ಸತೀಶ್, ಕೋವಿಡ್ ಜಿಲ್ಲಾ ಮೇಲ್ವೀಚಾರಕಿ ಡಾ.ಅನುಪಮಾ, ತಹಸೀಲ್ದಾರ್ ಎನ್.ವಿ.ನಟೇಶ್, ತಾ.ವೈದ್ಯಾಧಿಕಾರಿ ಎನ್.ವಿಜಯ್, ಡಾ.ನರಸೇಗೌಡ, ತಾ.ಪಂ.ಇಒ ರವಿಕುಮಾರ್ ಇದ್ದರು.