ಬೆಂಗಳೂರು: ಈ ಬಾರಿಯ ಫ್ಲವರ್ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಬಳಿಕ ಮಾತನಾಡಿದ್ದ ಅವರು, ಬಸವಣ್ಣನವರನ್ನು ಇನ್ಮುಂದೆ ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತೆ ಅಂತ ಹೇಳಿದ್ದರು.
ಮತ್ತೊಂದೆಡೆ ಫ್ಲವರ್ ಶೋನಲ್ಲಿ, ಇಕೆಬಾನ, ತರಕಾರಿ ಕೆತ್ತನೆ, ಥಾಯ್ ಆರ್ಟ್, ಜಾನೂರು ಮತ್ತು ಪುಷ್ಪ ರಂಗೋಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನ ಚಿತ್ರನಟಿ ತಾರಾ ಉದ್ಘಾಟನೆ ಮಾಡಿದ್ದರು. ಬಳಿಕ ಫ್ಲವರ್ ಶೋ ವೀಕ್ಷಿಸಿದ್ದರು.
ಈ ಬಾರಿಯೂ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮಕ್ಕಳು, ಕಪಲ್ಸ್, ವೃದ್ಧರು, ಮಹಿಳೆಯರು ಸೇರಿದಂತೆ ಕುಟುಂಬ ಸಮೇತರಾಗಿ ಬಂದು ಫ್ಲವರ್ ಶೋ ಎಂಜಾಯ್ ಮಾಡಿದ್ದಾರೆ.
ಗಣರಾಜ್ಯೋತ್ಸವದ ಪ್ರಯುಕ್ತವಾಗಿ ನಗರದ ಸಸ್ಯಕಾಶಿ ಲಾಲ್ಬಾಗ್ನಲ್ಲಿ 215ನೇ ಫ್ಲವರ್ ಶೋ ನಡೆಯುತ್ತಿದೆ. ವೀಕ್ಎಂಡ್ ಆಗಿರುವುದರಿಂದ ಸಾವಿರಾರು ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ. ಅದರಲ್ಲಿಯೂ ನಿನ್ನೆ ಗಣರಾಜ್ಯೋತ್ಸವ ಅಂಗವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಲಾಲ್ ಬಾಗ್ಗೆ ಭೇಟಿ ನೀಡಿದ್ದಾರೆ.
ನಿನ್ನೆ ಒಂದೇ ದಿನ ಲಕ್ಷಕ್ಕೂ ಹೆಚ್ಚು ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ. ಟಿಕೆಟ್ ಮಾರಾಟದಿಂದ 65 ಲಕ್ಷ ರೂ. ಆದಾಯವಾಗಿದೆ. ಈ ಬಾರಿ ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ನಾಳೆ ಕೊನೆಯ ದಿನವಾಗಿದೆ.