ಉಡುಪಿ, ಮಾ.1, ನ್ಯೂಸ್ ಎಕ್ಸ್ ಪ್ರೆಸ್: ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧದಿಂದ ಸಾವಿರಾರು ಸಾವು ನೋವುಗಳು ಸಂಭವಿಸುತ್ತದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು,. ಪಾಕ್ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು. ಶತ್ರುಗಳ ದೇಶದಲ್ಲಿ ಆತ ವರ್ತಿಸಿದ ರೀತಿ ದೇಶದ ಗೌರವ ಹೆಚ್ಚಿಸಿದೆ,. ಜೇಬಲ್ಲಿದ್ದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ ಜೊತೆ ಯುದ್ಧ ಬೇಡ. ಯುದ್ಧದಿಂದ ಸಾವಿರಾರು ಸಾವು ನೋವುಗಳು ಸಂಭವಿಸುತ್ತದೆಯುದ್ಧದಿಂದ ನಮ್ಮ ಸೈನಿಕರ ಸಾವಾಗುತ್ತದೆ. ಮೋದಿಗೆ ನನ್ನ ಅಭಿನಂದನೆ.. ಅವರ ಅಭಿವೃದ್ಧಿ ಮತ್ತು ಧೈರ್ಯ, ದಿಟ್ಟತನವನ್ನು ನಾನು ಮೆಚ್ಚುತ್ತೇನೆ. ಮೋದಿ ಸೂಕ್ತ ಸಮಯದಲ್ಲಿ ಪ್ರಧಾನಿಯಾಗಿದ್ದಾರೆ ಎಂದು ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.