ಹೈದರಾಬಾದ್, ಮಾ.1, ನ್ಯೂಸ್ ಎಕ್ಸ್ ಪ್ರೆಸ್: ಭಾರತ ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿಯಲ್ಲಿ ಕೇಂದ್ರ ಆಡಳಿತ ಬಿಜೆಪಿ ಎನ್ನು ಗುರಿಯಾಗಿಸಿ ನಟ ಕಮ್ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು, ಲೋಕಸಭಾ ಚುನಾವಣೆ ಮುಂಚೆಯೇ ಯುದ್ದ ನಡೆಯುತ್ತದೆ ಎಂದು ನನ್ನಗೆ ಹೇಳಿತ್ತು ಎಂಬ ಅಚ್ಚರಿಯ ಹೇಳಿಕೆ ನೀಡಿ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ.
ಪವನ್ ಕಲ್ಯಾಣ್ ಕಡಪಾ ನಗರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದಾರೆ. 2 ವರ್ಷ ಮೊದಲೇ ನನಗೆ ಬಿಜೆಪಿ ಯುದ್ದ ಸಮೀಪಿಸುತ್ತಿದೆ ಎಂದು ಹೇಳಿದೆ. ಇದರಿಂದ ದೇಶದ ಪ್ರಸ್ತುತ ಸ್ಥಿತಿ ಹೇಗಿದೆ ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಬಿಜೆಪಿ ತಾವು ಮಾತ್ರ ದೇಶಭಕ್ತ ಪಕ್ಷ ಎಂದು ಬಿಂಬಿಸಲು ನೋಡುತ್ತಿದೆ. ದೇಶಭಕ್ತಿ ಎನ್ನುವುದು ಕೇವಲ ಬಿಜೆಪಿಗೆ ಸೀಮಿತವಲ್ಲ. ನಾವು ಇದೇ ನೆಲದವರು ಅವರಿಗಿಂತ ಹತ್ತು ಪಟ್ಟು ದೇಶಭಕ್ತರು ಎಂದು ಪವನ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.