ಉದ್ಯಾನವನಗಳಲ್ಲಿ ತೇಜಸ್ವಿ ಸೂರ್ಯ ಮತಬೇಟೆ

ಉದ್ಯಾನವನಗಳಲ್ಲಿ ತೇಜಸ್ವಿ ಸೂರ್ಯ ಮತಬೇಟೆ

ಬೆಂಗಳೂರು, . 9, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿಯನ್ನು ಕಂಡಾಕ್ಷಣ ಪಾರ್ಕ್ ಗಳಲ್ಲಿ ವಾಕಿಂಗ್, ಜಾಕಿಂಗ್ ಮಾಡುತ್ತಿದ್ದ ನಾಗರೀಕರು ಮೋದಿ, ಮೋದಿ ಎಂದು ಜಯಕಾರ ಹಾಕುತ್ತಾ ತೇಜಸ್ವಿ ಸೂರ್ಯರವರ ಬಳಿ ಬಂದು ಬೆಂಬಲ ಸೂಚಿಸಿ ಅವರ ಹಿಂದೆಯೇ ಹೆಜ್ಜೆ ಹಾಕಿದರೆ, ಇನ್ನು, ಕೆಲವರು ಬಿಜೆಪಿ ಕರಪತ್ರಗಳನ್ನು ಪಡೆದು ತಾವು ಹಂಚಲು ಮುಂದಾಗಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದರು.ಅಷ್ಟರ ಮಟ್ಟಿಗೆ ಇಲ್ಲಿ ಬಿಜೆಪಿಯ ಪರ ಅಲೆ ಎದ್ದಿದೆ.

ಉದ್ಯಾನವನಗಳಲ್ಲಿ ತೇಜಸ್ವಿ ಸೂರ್ಯರನ್ನು ಕಂಡ ತಕ್ಷಣ ಕೆಲ ಹಿರಿಯ ನಾಗರೀಕರು , ಮಹಿಳೆಯರು ಸ್ವಯಂ ಪ್ರೇರಿತವಾಗಿ ಮುಂದೆ ಬಂದು ತಮ್ಮ ವಿಶೇಷ ಬೆಂಬಲವನ್ನು ಸೂಚಿಸಿದ್ದೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.

ತನ್ನ ಪಾಲಿಗೆ ಭದ್ರಕೋಟೆ ಎನಿಸಿಕೊಂಡಿರುವ ಬಸವನಗುಡಿಯಲ್ಲಿ ಬಿಜೆಪಿ ಮತ ಭರಾಟೆಯನ್ನು ಮುಂದುವರೆಸಿ ಮತದಾರನನ್ನು ಗೆಲ್ಲಲು ಯಶಸ್ವಿಯಾಗಿದೆ.

ಅಂದಹಾಗೇ ಇಂದು ಬಸವನಗುಡಿಯ ಪ್ರಮುಖ ಉದ್ಯಾನವನಗಳಲ್ಲಿ ಚುರುಕಿನಿಂದ ಸಂಚರಿಸಿದಾಗ ಇಂತಹ ಚಿತ್ರಣಗಳು ಸರ್ವೇ ಸಾಮಾನ್ಯವಾಗಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅಷ್ಟರ ಮಟ್ಟಿಗೆ ನಾಗರೀಕರ ಮನ ದೋಚಿದ್ದಾರೆ.

ಈಗಾಗಲೇ, ಈ ಕ್ಷೇತ್ರದಲ್ಲಿ ಎದ್ದಿರುವ ಮೋದಿ ಅಲೆಯ ನಡುವೆಯೇ ಬಸವನಗುಡಿ ಶಾಸಕ ರವಿಸುಬ್ರಮಣ್ಯ, ಹನುಮಂತನಗರ ಬಿಬಿಎಂಪಿ ಸದಸ್ಯ ಕೆಂಪೇಗೌಡ, ವಿದ್ಯಾಪೀಠದ ಬಿಬಿಎಂಪಿ ಸದಸ್ಯೆ ಶ್ಯಾಮಲ ಸಾಯಿಕುಮಾರ್ , ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರ ಜೊತೆಗೂಡಿ ಉದ್ಯಾನವನಗಳಿಗೆ ಬೇಟಿ ನೀಡಿದ ತೇಜಸ್ವಿ ಸೂರ್ಯ ಮತದಾರರಲ್ಲಿ ಮತಯಾಚನೆ ನಡೆಸಿದರು.

ಫ್ರೆಶ್ ನ್ಯೂಸ್

Latest Posts

Featured Videos