ಕೊಟ್ಟೂರು, ಸೆ. 26 : ಪಾರಿವಾಳದೊಂದಿಗೆ ಸಾರಿಗೆ ಬಸ್ ಏರಿದ ವಿದ್ಯಾರ್ಥಿಯೊಬ್ಬರಿಗೆ ಕಂಡಕ್ಟರ್ ಶಾಕ್ ನೀಡಿದ್ದಾರೆ. ತಾಲೂಕಿನ ನಿಂಬಳಗೆರೆಯಿಂದ ಕೊಟ್ಟೂರಿಗೆ ಸಾಗುತ್ತಿದ್ದ ಬಸ್ನಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಯೊಬ್ಬ ತಾನೇ ಸಾಕಿದ ಪಾರಿವಾಳ ಜತೆಯಲ್ಲಿ ಕರೆದುಕೊಂಡು ಬಂದಿದ್ದ. ಮಾರ್ಗ ನಡುವಿನ ಮಂಗಾಪುರ ಗ್ರಾಮದ ಬಳಿ ಹಾರಿಡುವುದು ಆತನ ಉದ್ದೇಶ. ಪರಿವಾಳವನ್ನು ಗಮನಿಸಿದ ಕಂಡಕ್ಟರ್ ಅದಕ್ಕೂ ಟಿಕೆಟ್ ತೆಗೆದುಕೊಳ್ಳಲೇಬೇಕು ಎಂದಿದ್ದಾರೆ. ಮಂಗಾಪುರದವರೆಗೆ 5 ಕಿ.ಮೀ.ಕ್ರಮಿಸಲು 5 ರೂ.ನ ಟಿಕೆಟ್ ಕೊಡಲಾಗಿದೆ.