ಬೆಂಗಳೂರು, ಅ. 12: ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳು, ಕಚೇರಿ, ಮನೆ, ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರಮೇಶ್ ಮೂಲತಹ ರಾಮನಗರ ತಾಲೂಕಿನ ಮೇಳೆಹಳ್ಳಿ ಗ್ರಾಮದವರು. ರಾಮನಗರ ತಾಲ್ಲೂಕಿನ ಮಲ್ಲತ್ತಹಳ್ಳಿಯಯಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ. ಕಳೆದ 2010 ನೇ ಇಸವಿ ಇಂದ ಪರಮೇಶ್ವರ್ ಆಪ್ತ ಸಹಾಯಕರಾಗಿದ್ದ ರಮೇಶ್ ಕೆಪಿಸಿಸಿ ಕಚೇರಿಯಲ್ಲಿ ಬೆರಳಚ್ಚುಗಾರರಾಗಿ ಕೆಲಸ ಮಾಡುತ್ತಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಆಯ್ಕೆಯಾದ ನಂತರ ಪರಮೇಶ್ವರ್ ಪಿಎ ಆಗಿ ನೇಮಕಗೊಂಡದ್ದರು.
ಗೃಹ ಮಂತ್ರಿ ಆಗಿದ್ದ ಸಂದರ್ಭದಲ್ಲಿ ಪರಮೇಶ್ವರ್ ಡಿಸಿಎಂ ಮೇಲೂ ರಮೇಶ್ ಆಪ್ತ ಸಹಾಯಕರಾಗಿದ್ದರು. ರಮೇಶ್ ಅವರು ಚನ್ನಪಟ್ಟಣದಲ್ಲಿ ಮೂರು ಅಂತಸ್ತಿನ ಮನೆ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಮನೆ ಹಾಗೂ ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ 4 ಸೈಟು ಹೊಂದಿದ್ದಾರೆ ಎನ್ನಲಾಗಿದೆ.