ಅಯೋ ಪಾಪ : ‘ಪಾಕ್’ ಮನೆಗೆ ಹೋಗೋಲ್ವಂತೆ

ಅಯೋ ಪಾಪ : ‘ಪಾಕ್’  ಮನೆಗೆ ಹೋಗೋಲ್ವಂತೆ

ಮ್ಯಾಂಚೆಸ್ಟರ್,ಜೂ.19 : ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಹೀನಾಯವಾಗಿ ಸೋತ ಬಳಿಕ ಒತ್ತಡಕ್ಕೆ ಒಳಗಾಗಿರುವ ನಾಯಕ ಮನಬಂದಂತೆ ಸಹ ಆಟಗಾರರ ಮೇಲೆ ರೇಗಾಡಿದ್ದಾರೆ.ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ ಇನ್ನುಳಿದ 4 ಪಂದ್ಯಗಳಲ್ಲಿ  ಗೆಲ್ಲಲೇಬೇಕಾದ ಸ್ಥಿತಿಯಲ್ಲಿರುವ ಪಾಕಿಸ್ತಾನ ತಂಡದ ಆಟಗಾರರು ಈಗಾಗಲೇ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಪಂದ್ಯ ಮುಗಿದ ಬಳಿಕ ಪಾಕಿಸ್ತಾನದ ನಾಯಕ ಸರ್ಫರಾಜ್ ಅಹ್ಮದ್ ಡ್ರೆಸ್ಸಿಂಗ್ ಕೋಣೆಯಲ್ಲಿ ಸಹ ಆಟಗಾರರ ಮೇಲೆ ಹರಿಹಾಯ್ದರು.

5 ಪಂದ್ಯಗಳಿಂದ ಕೇವಲ 3 ಅಂಕಗಳಿಸಿರುವ ಪಾಕಿಸ್ತಾನ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಪಾಕಿಸ್ತಾನಿ ಅಭಿಮಾನಿಗಳು ಈಗಾಗಲೇ ಆಕ್ರೋಶಗೊಂಡಿದ್ದು, ಸಾಮಾಜಿಕ ತಾಣಗಳಲ್ಲಿ  ತಂಡವನ್ನು ಮನಸ್ಸಿಗೆ ಬಂದಂತೆ ಟೀಕಿಸುತ್ತಿದ್ದಾರೆ. ಸಹಜವಾಗಿಯೇ ಆಟಗಾರರು ಹೆದರಿದ್ದು, ತವರಿಗೆ ವಾಪಸಾಗಲು ಆತಂಕ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos