ಇಸ್ಲಾಂಬಾದ್, ಆ. 31 : ಪಾಕಿಸ್ತಾನದಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆಯಾಗಿದೆ. ಉತ್ತರ ಖೈಬರ್ ಪಖ್ತುಂಖ್ವಾ ಪ್ರದೇಶದ ಬನ್ರ್ ನಲ್ಲಿ ಗಾಯಕಿ ಸನಾರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ. ಆಕೆಯ ಸೋದರನೇ ಕೊಲೆ ಮಾಡಿದ್ದಾನೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು, ಸನಾಳನ್ನು ಆಕೆಯ ಸೋದರನೇ ಕೊಲೆ ಮಾಡಿದ್ದಾನೆ. ಘಟನೆ ನಂತರ ಆತ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಇದೊಂದು ಮರ್ಯಾದೆಗೇಡಿ ಹತ್ಯೆ ಪ್ರಕರಣ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಹಿಂದೆಯೂ ಇಂತಹುದೇ ಪ್ರಕರಣದಲ್ಲಿ ಗಾಯಕಿಯೊಬ್ಬರನ್ನು ಹತ್ಯೆಗೈಯಲಾಗಿತ್ತು