ನವದೆಹಲಿ, ಸೆ.24 : ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಕ್ರಿಕೆಟ್ ಬಾಂಧವ್ಯ ಕಡಿದು ವರ್ಷಗಳೇ ಸಂದಿವೆ. ಈಗ ಮತ್ತೆ ಪಾಕ್ ಜೊತೆ ಕ್ರಿಕೆಟ್ ಆಡಲು ಭಾರತ ರೆಡಿಯಾಗಿದೆ ಎಂದು ಬಿಸಿಸಿಐ ಆಡಳಿತಗಾರರ ಸಮಿತಿ ಮುಖ್ಯ್ಸ್ಥ ವಿನೋದ ರಾಯ್ ಹೇಳಿಕೆ ನೀಡಿದ್ದಾರೆ.ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಾಯೋಜಿತ ಕ್ರಿಕೆಟ್ ಟೂರ್ನಿಗಳಲ್ಲಷ್ಟೇ ಟೀಮ್ ಇಂಡಿಯಾ ಭಾಗವಹಿಸುತ್ತಿದೆ. ಈ ಮಧ್ಯೆ ಬಿಸಿಸಿ ಐ ಮೇಲ್ವಿಚಾರಣೆ ನಿವಹಿಸುತ್ತಿರುವ ಸುಪ್ರೀಂ ಕೋರ್ಟ್ ನೇಮಿತ ಆಡಳಿತಗಾರರ ಸಮಿತಿ ಮುಖ್ಯಸ್ಥ ವಿನೋದ್ ರಾಯ್ ಕುತೂಹಲದಾಯಕ ಹೇಳಿಕೆಯನ್ನು ನೀಡಿದ್ದಾರೆ.
ತಟಸ್ಥ ತಾಣಗಳಲ್ಲಿ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಡಲು ಭಾರತೀಯ ಸರಕಾರವು ಸಿದ್ಧ. ಭಾರತ ಹಾಗೂ ಪಾಕಿಸ್ತಾನ ನಡುವಣ ಕ್ರಿಕೆಟ್ ಪುನರಾರಂಭಕ್ಕೆ ವೇದಿಕೆಯಾಗಬಹುದೇ ಕಾದು ನೋಡಬೇಕಿದೆ.