ಇಸ್ಲಾಮಾಬಾದ್, ಆ. 15 : ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಭಾರತ ತೆಗೆದುಕೊಂದ ನಿರ್ಧಾರವನ್ನು ಅಂತಾರಾಷ್ಟ್ರೀಯ ಸಮುದಾಯ ಬೆಂಬಲಿಸಿದರೆ, ಮುಸ್ಲಿಮರು ಧಂಗೆ ಏಳಬೇಕಾಗುತ್ತದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇರವಾಗಿಯೇ ಬೆದರಿಕೆ ಒಡ್ಡಿದ್ದಾರೆ. ಜಮ್ಮು ಮತ್ತು ಕಾಶೀರಕ್ಕೆ ವಿಶೇಷ ಸ್ಥಾನಮಾನ ನೀದಿದ್ದ ಸಂವಿಧಾನದ 370 ನೇ ವಿಧಿಯನ್ನು ಭಾರತ ಸರ್ಕಾರ ರದ್ದುಗೊಳಿಸಿದ ನಡೆಗೆ ಸಂಬಂಧಿಸಿದಂತೆ ಯಾವುದೇ ದೇಶ ಭಾರತವನ್ನು ಬೆಂಬಲಿಸಿದ್ದೇ ಆದರೆ, ಆ ದೇಶದಲ್ಲಿರುವ ಮುಸ್ಲಿಮರು ಧಂಗೆ ಏಳುತ್ತಾರೆ ಎಂದು ಖಾನ್ ಹೇಳಿದರು.