ಮುಟ್ಟಿನ ನೋವು ಹೆಚ್ಚಾಗಲು ಕಾರಣ.?

ಮುಟ್ಟಿನ ನೋವು ಹೆಚ್ಚಾಗಲು ಕಾರಣ.?

ಬೆಂಗಳೂರು, ಮೇ.11, ನ್ಯೂಸ್ ಎಕ್ಸ್ ಪ್ರೆಸ್:  ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಮಹಿಳೆಯಾದವಳು ಪ್ರತಿ ತಿಂಗಳು 3-4 ದಿನ ಯಮ ಯಾತನೆ ಅನುಭವಿಸಲೇಬೇಕು. ಕೆಲವರನ್ನು ಮುಟ್ಟು ಅತಿಯಾಗಿ ಕಾಡುತ್ತದೆ. ಕಾಲು-ಸೊಂಟ ನೋವು, ರಕ್ತಸ್ರಾವ, ಮಾನಸಿಕ ಕಿರಿಕಿರಿ ಸಾಕಪ್ಪ ಸಾಕು ಎನ್ನುವಂತೆ ಮಾಡುತ್ತದೆ. ಮುಟ್ಟಿನ ನೋವು ಹೆಚ್ಚಾಗಲು ನಮ್ಮ ಜೀವನ ಶೈಲಿ ಕೂಡ ಕಾರಣ. ನಾವು ತಿನ್ನುವ ಆಹಾರ ಹಾಗೂ ಜೀವನಾಭ್ಯಾಸಗಳು ಮುಟ್ಟಿನ ನೋವನ್ನು ಹೆಚ್ಚು ಮಾಡುತ್ತವೆ.

ದೇಹದಲ್ಲಿ ಹಾರ್ಮೋನುಗಳ ಸಮತೋಲನಕ್ಕೆ ನಿದ್ರೆ ಬೇಕೇಬೇಕು. ಅಗತ್ಯವಿರುವಷ್ಟು ನಿದ್ರೆ ದೇಹಕ್ಕೆ ಸಿಕ್ಕಿಲ್ಲವೆಂದಾದ್ರೆ ಮುಟ್ಟಿನ ಅವಧಿಯಲ್ಲಿ ನೋವು ತಿನ್ನಬೇಕಾಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಮುಟ್ಟಿನ ಸಮಯದಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳುತ್ತದೆ. ಕಾಫಿಯಲ್ಲಿರುವ ಕೆಫೆನ್ ಇದಕ್ಕೆ ಕಾರಣ. ಕಾಫಿ ಕುಡಿಯುವುದರಂದ ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕಾಗುತ್ತದೆ. ಇದು ರಕ್ತನಾಳ ಕಿರಿದಾಗಿ ನೋವು ಹೆಚ್ಚಾಗಲು ಕಾರಣವಾಗುತ್ತದೆ.

ಧೂಮಪಾನ ಹಾಗೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ. ಇದು ಎಲ್ಲರಿಗೂ ತಿಳಿದಿರುವ ವಿಷ್ಯ. ಆದರೆ, ಇದು ಮುಟ್ಟಿನ ಮೇಲೂ ಪ್ರಭಾವ ಬೀರುತ್ತದೆ. ಧೂಮಪಾನ ಹಾಗೂ ಮದ್ಯಪಾನ ಮಾಡುವ ಮಹಿಳೆಯರಲ್ಲಿ ಮುಟ್ಟಿನ ವೇಳೆ ಹೆಚ್ಚು ನೋವಾಗುತ್ತದೆ.

ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಬೇಕೆಂದರೆ ವ್ಯಾಯಾಮ ಮಾಡಬೇಕು. ವ್ಯಾಯಾಮ ಆರೋಗ್ಯ ವೃದ್ಧಿಗೆ ಒಳ್ಳೆಯದು. ಆದರೆ, ಬಹುತೇಕ ಮಹಿಳೆಯರು ಮುಟ್ಟಿನ ವೇಳೆ 3 ಹೊತ್ತು ಹಾಸಿಗೆ ಮೇಲಿರುತ್ತಾರೆ. ಇದು ನೋವು ಇನ್ನಷ್ಟು ದಿನ ಕಾಡಲು ಕಾರಣವಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos