ನಮ್ಮಿಬ್ಬರನ್ನು ಹೊಂದು ಮಾಡಿ ಅಂತ ‌ಪಾಗಲ್‌ ಪ್ರೇಮಿ ಪೋಲೀಸರ ಮೊರೆ!

ನಮ್ಮಿಬ್ಬರನ್ನು ಹೊಂದು ಮಾಡಿ ಅಂತ ‌ಪಾಗಲ್‌ ಪ್ರೇಮಿ ಪೋಲೀಸರ ಮೊರೆ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರೀತಿ ಮಾಡಿ  ಓಡಿ ಹೋಗಿ ಮದುವೆಯಾಗುವ ದೃಶ್ಯಗಳನ್ನು ಎಷ್ಟು ನೋಡಿದ್ದೇವೆ ಆದರೆ ಇಲ್ಲೊಬ್ಬ ತಾನು ಪ್ರೀತಿಸಿದ ಹುಡುಗಿಗಾಗಿ ಪೋಲೀಸರ ಮೊರೆ ಹೋಗಿದ್ದಾನೆ.

ಅಜಿತ್​ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಆರಂಭಿಸಿದ ಸಮಯದಲ್ಲಿ ಪ್ರೀತಿ, ಪ್ರೇಮದ ಬಗ್ಗೆ ಆಸಕ್ತಿ ಇರಲಿಲ್ಲ. ಇದೇ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಪ್ನ ಅವರು ಲ್ಯಾಬ್‌ ಟೆಕ್ನಿಷಿಯನ್ ಆದ ಅಜಿತ್​ ಅವರೊಂದಿಗೆ ಸಲುಗೆಯಿಂದ ವರ್ತಿಸಲು ಆರಂಭಿಸಿದ್ದಾರೆ. ಕಾಲ ಕಳೆದಂತೆ “ನಿನ್ನನು ಪ್ರೀತಿಸಿ ಮದುವೆ ಮಾಡಿಕೊಳ್ಳುವೆ”ಎಂದು ಸ್ವಪ್ನ ಹೇಳಿದ್ದಾರೆ.

ಅಜಿತ್ ನಾನು ಬೇರೆ ಜಾತಿಯವ ನೀನು ಬೇರೆ ಜಾತಿಗೆ ಸೇರಿದವಳು ನನ್ನ ನಿನ್ನ ಪ್ರೀತಿಗೆ ನಮ್ಮ ಕುಟುಂಬದವರು ಒಪ್ಪಿಕೊಳ್ಳುವುದಿಲ್ಲ ಎಂದು ಬುದ್ಧಿವಾದ ಹೇಳಿದ್ದಾನೆ.

ಆಗ ಸ್ವಪ್ನ ನಮ್ಮ ಮನೆಯಲ್ಲಿ ಒಪ್ಪದಿದ್ದರೆ ನಾನು ನಮ್ಮ ಕುಟುಂಬವನ್ನು ಬಿಟ್ಟು ನಿನ್ನೊಂದಿಗೆ ಬರುತ್ತೇನೆ ಎಂದು ಹೇಳಿದ್ದಾಳೆ. ಆಗ ಅಜಿತ್ ಇವಳ ಪ್ರೀತಿ ಮಾತಿಗೆ ಮರುಳಾಗಿ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದಾನೆ.

ಕಾಲಕ್ರಮೇಣ, ಸ್ವಪ್ನರವರು ಅಜಿತ್​​ ಜೊತೆ ಲೈಂಗಿಕ ಸಂಬಂಧ ಬೆಳಸಿ, ಪ್ರಿಯಕರನಿಂದ ಲಕ್ಷಗಟ್ಟಲೆ ಹಣವನ್ನು ಖರ್ಚು ಮಾಡಿಸಿದ್ದಾರೆ. ದಿನಗಳು ಕಳೆದಂತೆ ಸ್ವಪ್ನ ಅವರು ಅಜಿತ್​ರಿಂದ ದೂರವಾಗಲು ಆರಂಭಿಸಿದ್ದು, ಬೇರೊಬ್ಬ ಯುವಕ ರವಿಯೊಂದಿಗೆ ಸಲುಗೆಯಿಂದ ಇರಲು ಆರಂಭಿಸಿದ್ದಾರೆ. ಕೊನೆಗೆ ಒಂದು ದಿನ ಅಜಿತ್​ ಅವರಿಗೆ ಕೈಕೊಟ್ಟು ಸ್ವಪ್ನರವರು ರವಿಯನ್ನು ಪ್ರೀತಿಸಲು ಆರಂಭಿಸಿದ್ದಾರೆ. ಅಲ್ಲದೆ ಸ್ವಪ್ನ ರವಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದಾರೆ.

ಇದರಿಂದ ಮನನೊಂದ ಅಜಿತ್​ ಅವರು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದಾಗ ಬಂಧು-ಮಿತ್ರರು ತಡೆದಿದ್ದಾರೆ. ಇನ್ನು ನಮ್ಮಿಬ್ಬರನ್ನು ಒಂದು ಮಾಡುವಂತೆ ಅಜಿತ್​ ರಾಯಚೂರು ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಂದು ವೇಳೆ ನಾನೇನಾದರು ಅನಾಹುತ ಮಾಡಿಕೊಂಡರೆ ಅದಕ್ಕೆ ನೇರ ಕಾರಣ ಸ್ವಪ್ನ ಮತ್ತು ರವಿ ಕಾರಣ ಎಂದು ಅಜಿತ್​ ದೂರಿನಲ್ಲಿ ದಾಖಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos