ಆಪರೇಷನ್​ ಆಡಿಯೋ: ತನಿಖೆ ಆದ್ರೆ “ಬಿಜೆಪಿಯ ಈ ಶಾಸಕ”ನ ಸ್ಥಾನಕ್ಕೆ ಕುತ್ತು?

ಆಪರೇಷನ್​ ಆಡಿಯೋ: ತನಿಖೆ ಆದ್ರೆ “ಬಿಜೆಪಿಯ ಈ ಶಾಸಕ”ನ ಸ್ಥಾನಕ್ಕೆ ಕುತ್ತು?

ರಾಯಚೂರು: ರಾಷ್ಟ್ರ ಮತ್ತು ರಾಜ್ಯ ರಾಜಕೀಯದಲ್ಲಿ ಬಿಜೆಪಿಯ ಆಪರೇಷನ್ ಧ್ವನಿ ಸುರುಳಿ ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಬೀಸುತ್ತಿದೆ.

ಈ ನಡುವೆ ರುಮಠಕಲ್ ಶಾಸಕನ ಪುತ್ರ ಶರಣಗೌಡ ಪಾಟೀಲ್​ ಜತೆ ಯಡಿಯೂರಪ್ಪ ಮಾತುಕತೆ ನಡೆಸುವ ವೇಳೆ ಶಾಸಕ ಕೆ.ಶಿವನಗೌಡ ನಾಯಕ ಭಾಗಿಯಾಗಿದ್ದರು ಎಂಬ ಆರೋಪ ಕೇಳಿಬಂದಿದೆ.

ಸದ್ಯ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹೆಣೆದ ರಣತಂತ್ರದಲ್ಲಿ ಶಿವನಗೌಡ ನಾಯಕ್​ ಭಾಗಿಯಾಗಿದ್ದಾರಂತೆ. ಅಲ್ಲದೇ ಧ್ವನಿ ಸುರುಳಿಯ ಮೂಲಕ ಸಿಲುಕಿಹಾಕಿಕೊಂಡಿದ್ದಾರೆ ಎಂಬ ಆರೋಪಗಳು ಹರಿದಾಡುತ್ತಿವೆ. ಇದರಿಂದ ಕೆ. ಶಿವನಗೌಡ ನಾಯಕ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರಬಹುದು ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos