ಬೆಂಗಳೂರು,ಡಿ. 19 : ಭಾರೀ ವಿವಾದವನ್ನು ಸೃಷ್ಟಿಸುತ್ತಿರುವ ಡಿಸಿಎಂ ಹುದ್ದೆ ರದ್ದುಪಡಿಸಲು ಸಿಎಂ ಬಿಎಸ್ ವೈ ರೆಡಿಯಾಗಿದ್ದಾರೆ. 22, 23ರಂದು ನವದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆಗೆ ಸಮಯ ನಿಗದಪಡಿಸಲಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆ ರದ್ದುಪಡಿಸುವ ಕುರಿತಂತೆ ಅನುಮತಿ ಪಡೆದುಕೊಳ್ಳಲಿದ್ದಾರೆ.
ಆಡಳಿತಾತ್ಮಕ ಅನುಕೂಲಕ್ಕಾಗಿ ಉಪಮುಖ್ಯಮಂತ್ರಿಗಳ ಹುದ್ದೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೂರು ಹುದ್ದೆಗಳನ್ನು ಕಿತ್ತಿ ಹಾಕಲು ಬಿಎಸ್ವೈ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
23ರ ನಂತರ ಯಾವುದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಈಗಾಗಲೇ ಇನ್ನೊಂದು ಡಿಸಿಎಂ ಹುದ್ದೆಯನ್ನು ನೀಡಬೇಕೆಂದು ಸಚಿವ ಶ್ರೀರಾಮುಲು, ನೂತನ ಶಾಸಕ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ. ಶತಾಯಗತಾಯ ಡಿಸಿಎಂ ಸ್ಥಾನ ಪಡೆಯಲೇಬೇಕೆಂದು ಇಬ್ಬರು ನಾಯಕರು ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುತ್ತಿದ್ದಾರೆ.