ಓಲೇಕಾರರನ್ನು ಮಂತ್ರಿ ಮಾಡಿ

ಓಲೇಕಾರರನ್ನು ಮಂತ್ರಿ ಮಾಡಿ

ಶಿವಾಜಿನಗರ, ಜು 30: ಛಲವಾದಿ ಸಮಾಜದ ಶಾಸಕ ನೆಹರೂ ಓಲೇಕಾರ್ ಅವರನ್ನು ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಮಾಡಬೇಕು ಎಂದು ಚಿತ್ರದುರ್ಗ ಛಲವಾದಿ ಗುರುಪೀಠದ ಶ್ರೀ ಬಸವನಾಗದೇವ ಶರಣರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದ ಬೆಂಬಲದಿಂದ ಬಿ.ಎಸ್.ಯಡಿಯೂರಪ್ಪ ಅವರು ಸುಭದ್ರ ಸರ್ಕಾರ ರಚಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ. ಛಲವಾದಿ ಸಮಾಜದವರು ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಛಲವಾದಿ ಸಮಾಜದವರೇ ಆದ ನೆಹರು ಓಲೇಕಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಹಾವೇರಿ ಶಾಸಕರಾಗಿ ನೆಹರು ಓಲೇಕಾರ್ ಸತತ ಮೂರು ಬಾರಿ ಆಯ್ಕೆಯಾಗಿದ್ದಾರೆ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಿಂದ ನಮ್ಮ ಸಮಾಜಕ್ಕೆ ಸೇರಿದ ಏಕೈಕ ಶಾಸಕರಾಗಿದ್ದಾರೆ. ಒಂದೂ ಕಪ್ಪುಚುಕ್ಕೆಯಿಲ್ಲದಂತೆ ರಾಜಕೀಯ ಜೀವನ ನಡೆಸಿರುವ ನೆಹರು ಓಲೇಕಾರ್, ಸ್ನಾತಕೋತ್ತರ ಪದವೀಧರರಾಗಿದ್ದು, ವರ್ಗರಹಿತ, ರಾಜಿರಹಿತ ಹಾಗೂ ಧರ್ಮಾತೀತ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ ಎಂದು ಶ್ಲಾಘಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಛಲಸ್ವಾಮಿ, ಹಾವೇರಿ ಜಿಲ್ಲಾಧ್ಯಕ್ಷ ಮುತ್ತಣ್ಣ, ಹಾವೇರಿ ಜಿಲ್ಲಾ ಮುಖಂಡ ಮೈಲಾರಪ್ಪ, ರಾಯಚೂರು ಅಧ್ಯಕ್ಷ ಟಿ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos