ಮಂಡ್ಯ : ಮಂಡ್ಯದಲ್ಲಿ ಬ್ಲಾಕ್ ಆಂಡ್ ವೈಟ್ ಟಿವಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ.ಹಳೆಯ ಟಿವಿಗೆ 10 ಲಕ್ಷ ಸಿಗುತ್ತದೆ ಎಂದು ವದಂತಿಯಿಂದ ಕಲರ್ ಟಿವಿ ಬಿಟ್ಟು ಬ್ಲಾಕ್ ಆಂಡ್ ವೈಟ್ ಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.
ಬ್ಲಾಕ್ ಆಂಡ್ ವೈಟ್ ಟಿವಿ ಕೊಳ್ಳುವಲ್ಲಿ ಜನ ಬಿಜಿಯಾಗಿದ್ದು, ಟಿವಿ ಜೊತೆಗೆ ಹಳೆಯ ರೇಡಿಯೋ ಹಾಗೂ ಟೇಪ್ರೆಕಾರ್ಡರ್‌ಗೂ ಬೇಡಿಕೆ ಹೆಚ್ಚಿದೆ. ಇದರಿಂದ ಅಸಲಿ ಕಾರಣ ತಿಳಿಯದೆ, ಟಿವಿ ಇಟ್ಟುಕೊಳ್ಳಲಾಗದೆ ಒದ್ದಾಡುವಂತಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್ ಆಂಡ್ ವೈಟ್ ಟಿವಿಯ ಚಿತ್ರಗಳು ವೈರಲ್ ಆಗಿವೆ.