ನವದೆಹಲಿ, ಜು. 2 : ಹಳೆ ದೆಹಲಿ ಚಾಂದಿನಿ ಚೌಕ್ ಹೌಜ್ ಖಾಜಿ 100 ವರ್ಷದ ಹಳೆಯ ದುರ್ಗಾ ದೇವಿ ದೇವಾಲಯವನ್ನು ಗುಂಪೊಂದು ಧ್ವಂಸಗೊಳಿಸಿದೆ. ಈ ಹಿನ್ನಲೆ ಎರಡು ಗುಂಪುಗಳ ನಡುವೆ ಗಲಾಟೆ ನಡೆಯುತ್ತಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗುಂಪಿನ ಜನರು ರೊಚ್ಚಿಗೆದ್ದಿದ್ದು, ಎರಡು ಗುಂಪಿನ ನಡುವೆ ಘರ್ಷಣೆ ನಡೆಯಲು ಕಾರಣವಾಗಿದೆ. ಈ ಸಂಬಂಧ ಪೊಲೀಸ್ ಉಪ ಆಯುಕ್ತರಾದ ಮಂದೀಪ್ ಸಿಂಗ್ ರಾಂಧವ ಟ್ವೀಟ್ ಮಾಡಿ, ಸ್ಥಳದಲ್ಲಿ ಶಾಂತಿ ಕಾಪಾಡಲು, ಸ್ಥಳೀಯರು ಪೊಲೀಸರಿಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ನಾವು ಕಾನೂನು ಕ್ರಮ ಕೈಗೊಂಡಿದ್ದೇವೆ ಮತ್ತು ಭಾವನೆಗಳನ್ನು ಸಮಾಧಾನಪಡಿಸಿ ಸೌಹಾರ್ದತೆಯನ್ನು ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸ್ಥಳದಲ್ಲಿ ಶಾಂತಿ ಸ್ಥಾಪಿಸಲು ಸಹಾಯ ಮಾಡಿ” ಎಂದು ಡಿಸಿಪಿ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಬಳಿಕ ಗಲಾಟೆ ಜೋರಾಗಿ ಹಲ್ಲೆಗೊಳಗಾದ ವ್ಯಕ್ತಿಯ ಕಡೆಯವರು ಹಲ್ಲೆ ನಡೆಸಿದ ಗುಂಪಿನ ಜೊತೆ ಹೊಡೆದಾಟ ನಡೆಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.