ಪುರಿ, ಮೇ.3, ನ್ಯೂಸ್ ಎಕ್ಸ್ ಪ್ರೆಸ್: ‘ಫನಿ’ ಚಂಡಮಾರುತವು 2 ದಶಕಗಳ ಬಳಿಕ ಒಡಿಶಾದಲ್ಲಿ ಇಂದು ಬೆಳಗ್ಗೆ ಅಪ್ಪಳಿಸಿದ್ದು, ಒಡಿಶಾದ ಜನರಲ್ಲಿ ಭಾರೀ ಅನಾಹುತವನ್ನು ಸೃಷ್ಟಿಸಿದೆ 180ರಿಂದ 200 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ ಭೂಕುಸಿತ ಉಂಟಾಗಿದ್ದು, ಸಾವಿರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಹಲವಾರು ಹಳ್ಳಿಗಳು ಮುಳುಗಡೆಯಾಗಿವೆ.
ಆಂಧ್ರಪ್ರದೇಶ ಹಾಗೂ ಪಶ್ಚಿಮಬಂಗಾಳದ ಕರಾವಳಿ ಪ್ರದೇಶಗಳಲ್ಲೂ ಜೋರಾಗಿ ಗಾಳಿ ಬೀಸಲಾರಂಭಿಸಿದೆ. ಸುಮಾರು ರಾತ್ರಿ 11:00 ಗಂಟೆಯ ತನಕ ಚಂಡಮಾರುತದ ಅಬ್ಬರ ಒಡಿಶಾದಲ್ಲಿ ಮುಂದುವರಿಯಲಿದ್ದು, ಮೇ. 4 ಬೆಳಗ್ಗೆ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ವಿಸ್ತರಣೆಯಾಗಲಿದೆ.