ಸಂಸದೆ ನುಸ್ರತ್ ಮದುವೆಯಾಗಲಿರುವ ಹುಡುಗ ಗೊತ್ತಾ?

ಸಂಸದೆ ನುಸ್ರತ್ ಮದುವೆಯಾಗಲಿರುವ ಹುಡುಗ ಗೊತ್ತಾ?

ಕೊಲ್ಕತ್ತಾ, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ತೆಲುಗು ಚಿತ್ರರಂಗದ ಮೂಲಕ ಸಿನಿ ಜಗತ್ತಿಗೆ ಪದಾರ್ಪಣೆ ಮಾಡಿದ್ದ ನುಸ್ರತ್‌ರ ಅವರು  ಇತ್ತೀಚೆಗಷ್ಟೇ ಸಂಸತ್ ಭವನದ ಮುಂದೆ ವಿದೇಶಿ ಉಡುಗೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಟೀಕಾಕಾರರಿಗೆ ಆಹಾರವಾಗಿದ್ದ ನಟಿ, ಪಶ್ಚಿಮ ಬಂಗಾಳದ ಸಂಸದೆ ನುಸ್ರತ್ ಜಹಾನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರ ‘ಶೋತ್ರು’. ನಂತರ ಖಿಲಾಡಿ 420, ಲವ್ ಎಕ್ಸ್ ಪ್ರೆಸ್, ಉಮಾ, ಕ್ರಿಸ್ ಕ್ರಾಸ್ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಈಗ ತಾನು ಮದುವೆಯಾಗಲಿರುವ ಹುಡುಗನ ಮಾಹಿತಿ ಬಿಟ್ಟು ಕೊಟ್ಟಿದ್ದಾರೆ.  ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿರುವ ನುಸ್ರತ್ ತಾನು ಮದುವೆಯಾಗಲಿರುವ ಹುಡುಗನ ಹೆಸರು ನಿಖಿಲ್ ಜೈನ್ ಎಂದು ಹೇಳುವ ಮೂಲಕ ಹಲವರ ಕುತೂಹಲಗಳಿಗೆ ತೆರೆ ಎಳೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos