ಬೆಂಗಳೂರು, ಅ. 17: ಕಾಂಗ್ರೆಸ್ ಮಾಜಿ ಮೇಯರ್ ಗಳಿಂದ ಆಗ್ರಹ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮೇಯರ್ ಹಾಗು ಮಾಜಿ ಆಡಳಿತ ಪಕ್ಷದ ನಾಯಕರು ಸುದ್ದಿಗೋಷ್ಠಿ. ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಮಾಜಿ ಮೇಯರ್ ಗಳಾದ ರಾಮಚಂದ್ರಪ್ಪ, ಪಿ.ಆರ್.ರಮೇಶ್, ಪದ್ಮಾವತಿ ಮಾಜಿ ಆಡಳಿತ ಪಕ್ಷದ ನಾಯಕರಾದ ಸತ್ಯನಾರಾಯಣ್, ಶಿವರಾಜ್ ವಾಜೀದ್, ಜಂಟಿ ಸುದ್ದಿಗೋಷ್ಠಿ. ಬಿಬಿಎಂಪಿಯನ್ನ ಎನ್ ಆರ್ ರಮೇಶ್ ಕಂಟ್ರೋಲ್ ಮಾಡುತ್ತಿದ್ದಾರೆ ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ದೂರು ಕೊಡುತ್ತಿದ್ದಾರೆ. ಎನ್ ಆರ್ ರಮೇಶ್ ಕಮಿಷನ್ ಏಜೆಂಟಾ? ಅವರೇನು ಸೂಪರ್ ಮಿನಿಸ್ಟರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ಎನ್ ಆರ್ ರಮೇಶ್ ಪತ್ರ ಬರೆದಿದ್ದಾರೆ. ವೈಟ್ ಟಾಪಿಂಗ್ 4ಜಿ ವಿನಾಯತಿ ಕೊಡಿ ಎಂದು ಎನ್ ಆರ್ ರಮೇಶ್ ಹೇಳುತ್ತಾರೆ. 16 ಕೋಟಿಯ ಕಾಮಗಾರಿಗಳಿಗೆ ಟೆಂಡರ್ ಯಾಕೆ ಕೊಟ್ಟಿಲ್ಲ? ಸಿಎಂ ಕಚೇರಿಗೆ ಎಷ್ಟು ಕಿಕ್ ಬ್ಯಾಕ್ ಹೋಗಿದೆ? ಎನ್ ಆರ್ ರಮೇಶ್ ವಿರುದ್ಧ ಮಾಜಿ ಸಂಸದ ವಿ ಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಎನ್ ಆರ್ ರಮೇಶ್ ಒಬ್ಬ ಕಮಿಷನ್ ಏಜೆಂಟ್
ಎನ್ ಆರ್ ರಮೇಶ್, ಮುಖ್ಖ ಕಾರ್ಯದರ್ಶಿ ಹಾಗು ಸಿಎಂ ಕಚೇರಿ ನಡುವೆ ನಡೆದಿರುವ ಹಗರಣ ಇನ್ನು ಈ ರೀತಿ ಎಷ್ಟು ಹಗರಣ ನಡೆದಿದೆ ಗೊತ್ತಿಲ್ಲ. ಈ ಹಗರಣದಲ್ಲಿ ಸಿ ಎಸ್ ಕೂಡ ಭಾಗಿಯಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಹಾಲಿ ಹೈಕೋರ್ಟ್ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು. ಇಲ್ಲದಿದ್ರೆ ಸರ್ಕಾರದ ವಿರುದ್ಧ ನಾವು ಬೀದಿಗೆ ಇಳಿದು ಹೋರಾಟ ಮಾಡುತ್ತೇವೆ ನ್ಯಾಯಯುತವಾಗಿರು ಅಧಿಕಾರಿಗಳ ಪರ ನಮ್ಮ ಪಕ್ಷ ಇರುತ್ತೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಹೇಳಿಕೆ ನೀಡಿದ್ದಾರೆ.