ದೇವನಹಳ್ಳಿ, ಜು. 8 : ಸರ್ಕಾರಿ ಕೆಲಸದಲ್ಲಿ ನಿವೃತ್ತಿ ಮತ್ತು ವರ್ಗಾವಣೆ ಅಧಿಕಾರಿಗಳಿಗೆ ಸರ್ವೇ ಸಾಮಾನ್ಯವಾಗಿದೆ ಎಂದು ವಿಜಯಪುರ ವೃತ್ತ ನಿರೀಕ್ಷಕ ಪ್ರಕಾಶ್ ತಿಳಿಸಿದರು.
ತಾಲೂಕಿನ ಚನ್ನರಾಯಪಟ್ಟಣ ಪೋಲಿಸ್ ಠಾಣೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ವಯೋನಿವೃತಿ ಹೊಂದಿದ ಸೋಣ್ಣಪ್ಪ ಹಾಗೂ ಬೇರೆ ಕಡೆ ವರ್ಗವಣೆಗೊಂಡ ಪಿಎಸ್ಐ ವೆಂಕಟೇಶ್ ಅವರನ್ನು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧಿಕಾರಿಗಳು ಎಷ್ಟು ದಿವಸ ಒಂದು ಊರಿನಲ್ಲಿ ಮತ್ತು ಆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತೇವೆ ಎಂಬುವುದು ಶಾಶ್ವತವಲ್ಲ. ಇಲಾಖೆಗೆ ಬರುವ ಜನರಿಗೆ ಅವರ ಕಷ್ಟಗಳನ್ನು ಅರಿತು ನ್ಯಾಯಾಯುತವಾಗಿ ಕೆಲಸ ಮಾಡಿಕೊಡುವುದೇ ಶಾಶ್ವತವಾಗಿ ಉಳಿಯುತ್ತದೆ. ಪ್ರತಿ ದಿನವೂ ಸಹ ಒಂದಲ್ಲೊಂದು ರೀತಿ ಒತ್ತಡದಲ್ಲಿ ಕೆಲಸ ಮಾಡುವಂತೆ ಆಗುತ್ತಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚು ಇದೆ ಎಂದರು.
ನಿವೃತಿ ಎಂಬುದು ಬದುಕಿನ ಅಂತ್ಯವೇನಲ್ಲ ಸರ್ಕಾರದ ಕಾನೂನಿನಂತೆ ನಿವೃತ್ತರಾದರೂ ತಮಗೆ ಇಷ್ಟವಾದ ಕಾರ್ಯದಲ್ಲಿ ಪ್ರವೃತ್ತರಾದಾಗ ಬದುಕು ಬಂಗಾರವಾಗುತ್ತದೆ ಎಂದರು.
ವಯೋನಿವೃತಿ ಹೊಂದಿದ ಸೋಣ್ಣಪ್ಪ ಮಾತನಾಡಿ, ಪೋಲಿಸ್ ಇಲಾಖೆಯಲ್ಲಿ ಮನಸ್ಸು ಮತ್ತು ಧೈರ್ಯವಿದ್ದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ಕೆಲಸದಲ್ಲಿ ನಾವು ಮಾಡುವ ಕರ್ತವ್ಯವನ್ನು ಸ್ಮರಿಸಬೇಕು ಎಂದು ಹೇಳಿದರು.
ವರ್ಗವಣೆಗೊಂಡ ಪಿಎಸ್ ಐ ವೆಂಕಟೇಶ್ ಮಾತನಾಡಿ, ಸಾರ್ವಜನಿಕ ಸೇವೆ ಮಾಡಲು ಪೋಲೀಸ್ ಇಲಾಖೆ ನಮಗೆ ಸಿಕ್ಕಿರುವ ದೊಡ್ಡ ಅವಕಾಶ. ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಪೋಲೀಸರ ಮೇಲಿರುವ ಉತ್ತಮ ಭಾವನೆಗಳು ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಚನ್ನರಾಯಪಟ್ಟಣ ಪಿಎಸ್ಐ ನಂದೀಶ್, ಪೋಲಿಸ್ ಇಲಾಖೆಯ ನಾರಾಯಣಸ್ವಾಮಿ, ಮಧು, ನಾಗರಾಜು, ಪ್ರಸನ್ನ, ಮಲ್ಲಪ್ಪ, ಅರುಣ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರು ಮತ್ತಿತರರು ಇದ್ದರು.
ಉಳಿಯುತ್ತದೆ. ಪ್ರತಿ ದಿನವೂ ಸಹ ಒಂದಲ್ಲೊಂದು ರೀತಿ ಒತ್ತಡದಲ್ಲಿ ಕೆಲಸ ಮಾಡುವಂತೆ ಆಗುತ್ತಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚು ಇದೆ ಎಂದರು.
ನಿವೃತಿ ಎಂಬುದು ಬದುಕಿನ ಅಂತ್ಯವೇನಲ್ಲ ಸರ್ಕಾರದ ಕಾನೂನಿನಂತೆ ನಿವೃತ್ತರಾದರೂ ತಮಗೆ ಇಷ್ಟವಾದ ಕಾರ್ಯದಲ್ಲಿ ಪ್ರವೃತ್ತರಾದಾಗ ಬದುಕು ಬಂಗಾರವಾಗುತ್ತದೆ ಎಂದರು.
ವಯೋನಿವೃತಿ ಹೊಂದಿದ ಸೋಣ್ಣಪ್ಪ ಮಾತನಾಡಿ, ಪೋಲಿಸ್ ಇಲಾಖೆಯಲ್ಲಿ ಮನಸ್ಸು ಮತ್ತು ಧೈರ್ಯವಿದ್ದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ನಮ್ಮ ಕೆಲಸದಲ್ಲಿ ನಾವು ಮಾಡುವ ಕರ್ತವ್ಯವನ್ನು ಸ್ಮರಿಸಬೇಕು ಎಂದು ಹೇಳಿದರು.
ವರ್ಗವಣೆಗೊಂಡ ಪಿಎಸ್ಐ ವೆಂಕಟೇಶ್ ಮಾತನಾಡಿ, ಸಾರ್ವಜನಿಕ ಸೇವೆ ಮಾಡಲು ಪೋಲೀಸ್ ಇಲಾಖೆ ನಮಗೆ ಸಿಕ್ಕಿರುವ ದೊಡ್ಡ ಅವಕಾಶ. ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ. ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಪೋಲೀಸರ ಮೇಲಿರುವ ಉತ್ತಮ ಭಾವನೆಗಳು ಮತ್ತಷ್ಟು ಗಟ್ಟಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಚನ್ನರಾಯಪಟ್ಟಣ ಪಿಎಸ್ಐ ನಂದೀಶ್, ಪೋಲಿಸ್ ಇಲಾಖೆಯ ನಾರಾಯಣಸ್ವಾಮಿ, ಮಧು, ನಾಗರಾಜು, ಪ್ರಸನ್ನ, ಮಲ್ಲಪ್ಪ, ಅರುಣ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಖಂಡರು ಮತ್ತಿತರರು ಇದ್ದರು.