ನವದೆಹಲಿ, ಡಿ. 18: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮೂರನೇ ಅಪರಾಧಿ ಅಕ್ಷಯ್‍ಕುಮಾರ್ ಸಲ್ಲಿಸಿದ್ದ ಕ್ಷಮಾದಾನ ಮರುಪರಿಶೀಲನೆ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿ ಎಲ್ಲಾ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿರುವುದನ್ನು ಆಕೆಯ ಪೋಷಕರು ಸ್ವಾಗತಿಸಿ ಸಂತಸ ವ್ಯಕ್ತಪಡಿಸಿದ್ದರು.
ಮಹತ್ವದ ತೀರ್ಪಿನ ನಂತರ ಸುಪ್ರೀಂಕೋರ್ಟ್ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಭಯಾ ಪೋಷಕರು ಕೊನೆಗೂ ನ್ಯಾಯ ದೊರೆತಿದೆ. ಕಳೆದ ಏಳು ವರ್ಷಗಳಿಂದ ನಮ್ಮ ಮಗಳ ಆತ್ಮಕ್ಕೆ ಶಾಂತಿ ದೊರಕಿಸಿಕೊಡಲು ಕಾನೂನು ಸಂಘರ್ಷ ನಡೆಸಿದ್ದೆವು. ನಮ್ಮ ಹೋರಾಟಕ್ಕೆ ತಕ್ಕ ಫಲಿತಾಂಶ ಲಭಿಸಿದೆ.
ನಿರ್ಭಯಾ ಮೇಲೆ ನಡೆದ ಅತ್ಯಂತ ಹೀನ ಪ್ರಕರಣದ 7 ವರ್ಷಗಳ ಬಳಿಕ ಹತ್ಯಾಚಾರಿಗಳಿಗೆ ಕೊನೆಗೂ ಮರಣದಂಡನೆ ಲಭಿಸಿರುವುದು ಆಕೆಯ ಬಂಧು-ಮಿತ್ರರು, ಹಿತೈಷಿಗಳು ಮತ್ತು ಗೆಳೆಯರಲ್ಲಿ ಭಾರೀ ಸಂತಸ ಮೂಡಿಸಿದೆ.