ನಿಮಗರಿವಿಲ್ಲದಂತೆ ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಬಹುದು ಎಚ್ಚರ…

ನಿಮಗರಿವಿಲ್ಲದಂತೆ ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಬಹುದು ಎಚ್ಚರ…

ಬೆಂಗಳೂರು, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ರಾಜಧಾನಿ ದೆಹಲಿಯಲ್ಲಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಯುವಕನ ಆಧಾರ್ ಕಾರ್ಡ್ ಗೆ ನಕಲಿ ಫೋಟೋ ಹಾಕಿದ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ದೋಚಿದ್ದಾನೆ. ನರೇಂದ್ರ ಬಿಶ್ತ್ ಎಂಬಾತ ಮೋಸಕ್ಕೊಳಗಾಗಿದ್ದಾನೆ. ಆತ ನೀಡಿದ ದೂರಿನ ಪ್ರಕಾರ, ಮಾರ್ಚ್ 16 ರಂದು ಮೊಬೈಲ್ ಗೆ ಒಟಿಪಿಯೊಂದು ಬಂದಿತ್ತಂತೆ. ಮೊಬೈಲ್ ಕಂಪನಿ ತಪ್ಪಿನಿಂದ ಒಟಿಪಿ ಬಂದಿದೆ ಎಂದುಕೊಂಡನಂತೆ. ಆದ್ರೆ ಇದಾದ ಕೆಲವೇ ಕ್ಷಣಗಳಲ್ಲಿ ಕ್ರೆಡಿಟ್ ಕಾರ್ಡ್ ನಿಂದ ಒಂದು ಲಕ್ಷ ರೂಪಾಯಿ ಡ್ರಾ ಆಗಿದೆ ಎಂಬ ಸಂದೇಶ ಬಂದಿದೆಯಂತೆ. ನರೇಂದ್ರ ಮೊಬೈಲ್ ಕಂಪನಿಗೆ ದೂರು ನೀಡಿದ್ದಾನೆ. ಆಗ ಆತನ ಒಂದು ಸಿಮ್ ಕೆಲಸ ಮಾಡ್ತಿಲ್ಲ ಎಂಬುದು ಗೊತ್ತಾಗಿದೆ. ಮೊಬೈಲ್ ಕಂಪನಿಯವರು ಕೆಲವೇ ದಿನಗಳ ಹಿಂದೆ ನಕಲಿ ಸಿಮ್ ನೀಡಿರುವುದಾಗಿ ಹೇಳಿದ್ದಾರೆ. ಇದ್ರಿಂದ ಚಕಿತಗೊಂಡ ನರೇಂದ್ರ ದಾಖಲೆ ಪರಿಶೀಲಿಸಿದ್ದಾನೆ. ಆಗ ಮೋಸವಾಗಿರುವುದು ಗೊತ್ತಾಗಿದೆ. ದಾಖಲೆಯಲ್ಲಿ ನರೇಂದ್ರನ ಆಧಾರ್ ಕಾರ್ಡ್ ಇದೆ. ಆದ್ರೆ ಫೋಟೋ ಬೇರೆಯದು. ನರೇಂದ್ರ ಇದನ್ನು ಪೊಲೀಸರಿಗೆ ನೀಡಿದ್ದಾನೆ. ಆರೋಪಿ ಹೆಸರು ಪತ್ತೆ ಮಾಡಿರುವ ಪೊಲೀಸರು, ಆರೋಪಿಗೆ ಆಧಾರ್ ಕಾರ್ಡ್, ಕ್ರೆಡಿಟ್ ಕಾರ್ಡ್ ಎಲ್ಲಿ ಸಿಗ್ತು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ. ಆರೋಪಿ ಬಂಧನಕ್ಕೆ ಮುಂದಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos