ನುಡಿ ಬಿಟ್ಟರೆ ನಾಡು ಬಿಟ್ಟಂತೆ

ನುಡಿ ಬಿಟ್ಟರೆ ನಾಡು ಬಿಟ್ಟಂತೆ

ದೇವನಹಳ್ಳಿ, ನ. 01: ಕನ್ನಡರಿಗೆ ಉದ್ಯೋಗ ಅವಕಾಶ ದೊರೆಯುವಂತೆ ಹಾಗೂ ಕನ್ನಡಿಗರಿಗೆ ಮೊದಲ ಆಧ್ಯತೆ ನೀಡಬೇಕು. ರಾಜ್ಯದಲ್ಲಿ ಕನ್ನಡಿಗರನ್ನು ನಿರ್ಲಕ್ಷ್ಯ ಮಾಡುತ್ತಿರುವುದಕ್ಕೆ ಸರೋಜಿನಿ ಮಹರ್ಷಿ ವರದಿಯಲ್ಲಿ ಕನ್ನಡಿಗರ ಪರವಾಗಿ ನಿಲ್ಲಲು ನಮ್ಮ ಕಂದಂಬ ಸೇನೆ ರಾಜ್ಯದ ಜಿಲ್ಲಾಧ್ಯಂತ ಜಾರಿ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ ಎಂದು ಕದಂಬ ಸೇನೆ ರಾಜ್ಯ ಉಪಾಧ್ಯಕ್ಷ ದೇವನಹಳ್ಳಿ ದೇವರಾಜ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಕದಂಬ ಸೇನೆ ವತಿಯಿಂದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಡಾ. ಸರೋಜಿನಿ ಮಹಿಷಿ ವರದಿ ಜರಿಗಾಗಿ ಪದ್ಮಭೂಷಣ ಡಾ ರಾಜ್‌ಕುಮಾರ್ ರವರ ಸುಪುತ್ರ ಮೇರುನಟ ಶಿವರಾಜ್‌ಕುಮಾರ್ ಹೋರಾಡಲಿ. ಅಂದು ಗೋಕಾಕ್ ಚಳವಳಿ ಡಾ ರಾಜ್‌ಕುಮಾರ್ ರವರ ನೇತೃತ್ವದಲ್ಲಿ ಬೀದಿಗಿಳಿದು ಪ್ರಖ್ಯಾತ ನಟ-ನಟಿಯರು ಕನ್ನಡ ಚಲನಚಿತ್ರ ತಂಡವೇ ಬೃಹತ್ತಾಗಿ ಹೋರಾಟ ಮಾಡಿ ಕರ್ನಾಟಕದಲ್ಲಿ ಸಂಚಲನ ಉಂಟು ಮಾಡಿತ್ತು.  ಸಮಸ್ತ ಕನ್ನಡಿಗರು ಕೈ ಜೋಡಿಸಿ ಬೆಂಬಲಕ್ಕೆ ನಿಂತು ಹೋರಾಟ ಮಾಡಿದ್ದರು. ಅದಕ್ಕೆ ಫಲ ಸಿಕ್ಕಿತು ಎಂದರು.

ಈಗ ಕರ್ನಾಟಕದಲ್ಲಿ ಕನ್ನಡಿಗರ ಉದ್ಯೋಗವನ್ನು ಪರಭಾಷಿಕರು ಕಿತ್ತುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಉದ್ಯೋಗ ಮಾತ್ರವಲ್ಲ. ವ್ಯಾಪಾರ ಹಾಗೂ ಉದ್ಯಮ ರಂಗದ ಅವಕಾಶಗಳಿಂದಲೂ ಕನ್ನಡಿಗರು ವಂಚಿತವಾಗತೊಡಗಿದ್ದಾರೆ.  ಕರ್ನಾಟಕ ರಾಜ್ಯವಾಳಿದ ಎಲ್ಲಾ ಸರ್ಕಾರಗಳು ಕನ್ನಡಿಗರಿಗೆ ವಂಚನೆ ಮಾಡಿವೆ. ಆದ್ದರಿಂದ ಮೇರು ನಟ ಶಿವರಾಜ್‌ಕುಮಾರ್ ನೇತೃತ್ವ ವಹಿಸಲು, ಪ್ರಖ್ಯಾತ ನಟರಾದ ಪುನೀತ್ ರಾಜ್‌ಕುಮಾರ್, ಸುದೀಪ್, ದರ್ಶನ್, ಯಶ್, ಗಣೇಶ್, ಹಿರಿಯ ನಟರಾದ ರವಿಚಂದ್ರನ್, ಉಪೇಂದ್ರ, ನಟ-ನಟಿಯರು ಚಲನಚಿತ್ರ ತಂಡ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಲಿ ಎಂದು ಹೇಳಿದರು.

ಕರ್ನಾಟಕದಲ್ಲಿ ಪರಭಾಷ್ಯಯ ಚಲನಚಿತ್ರಗಳು ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಆಕ್ರಮಿಸಿಕೊಂಡು ಕನ್ನಡ ಚಲನಚಿತ್ರಗಳಿಗೆ ಅವಕಾಶ ನೀಡುತ್ತಿಲ್ಲವೆಂದು ಪ್ರತಿಭಟನೆಗಳು, ಆರೋಪಗಳು ಬರುತ್ತಲೇ ಇವೆ.  ಇದೆ ಸತ್ಯ ಕನ್ನಡ ನೆಲದಲ್ಲಿ ಬದುಕು ಕಟ್ಟಿಕೊಂಡಿರುವ ಕೀರ್ತಿ ಹಣ ಸಂಪಾದಿಸಿರುವ ನಟ-ನಟಿಯರು ಚಲನಚಿತ್ರ ತಂಡದವರೇ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೊಗದಲ್ಲಿ ಮೀಸಲಾತಿ ದೊರಕದಿದ್ದರೆ ಕನ್ನಡಿಗರು ನಿರುದ್ಯೋಗಿಗಳಾದರೆ, ಕನ್ನಡ ಚಲನಚಿತ್ರಗಳು ಸೋಲುತ್ತಿವೆ ಎಂದು ಎಚ್ಚರಿಕೆ ನೀಡಿದೆ ಕದಂಬಸೈನ್ಯ, ಕನ್ನಡಿಗ ಉಳಿದರೆ ಕನ್ನಡ, ಕನ್ನಡ ಚಲನಚಿತ್ರ

ಉಳಿಯುತ್ತದೆ.  ಕನ್ನಡಿಗರ ಬದುಕು ಬಹಳ ಮುಖ್ಯವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕನನ್ಡಿಗರ ಉದ್ಯೋಗ ಮೀಸಲತಿ ಡಾ. ಸರೋಜಿನಿ ಮಹಿಷಿ ವರದಿ ಜಾರಿಯ ವಿಷಯದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಬೇಕು.ಕನ್ನಡ ಸಾಹಿತ್ಯ ಪರಿಷತ್ ಬೆಂಬಲಕ್ಕೆ ನಿಲ್ಲಬೇಕು ಎಂದರು.

ಪ್ರಖ್ಯಾತ ನಟರಾದ ಡಾ. ರಾಜ್‌ಕುಮಾರ್, ಡಾ ವಿಷ್ಣುವರ್ಧನ್, ಡಾ ಅಂಬರೀಷ್, ಅಭಿಮಾನಿಗಳು ಮತ್ತು ಮೇರು ನಟರಾದ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್, ಯಶ್, ಗಣೇಶ್, ಹಿರಿಯ ನಟರಾದ ರವಿಚಂದ್ರನ್, ಉಪೇಂದ್ರ, ಅಭಿಮಾನಿ ಸಂಘಗಳು ಕೈಜೋಡಿಸಬೇಕು ಎಂದು ಕದಂಬ ಸೈನ್ಯ ಮನವಿ ಮಾಡಿದೆ.

ಕನ್ನಡಿಗರು ನಿಮ್ಮ ಜೊತೆಯಲ್ಲಿ ಕೈ ಜೋಡಿಸುತ್ತೇವೆ. ನುಡಿ ಬಿಟ್ಟರೆ ನಾಡು ಬಿಟ್ಟಂತೆ, ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ, ಕನ್ನಡ ವಿರೋಧಿಗಳಿಗೆ ಎಚ್ಚರಿಕೆ ಆಗಿದೆ ಎಂದು ಹೇಳಿದರು.

ಈ ವೇಳೆಯಲ್ಲಿ ಜಿಲ್ಲಾಧ್ಯಕ್ಷ ದೊಡ್ಡ ಕೋಲಿಗ ಪ್ರವೀಣ್ ಗೌಡ, ತಾಲೂಕು ಅಧ್ಯಕ್ಷ ಬೂದಿಗೆರೆ ಭರತ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ವಿಕ್ಕಿ ಚರಣ್, ಉಪಾಧ್ಯಕ್ಷ ಶ್ರೀನಿವಾಸ್ ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos