ಬೆಂಗಳೂರು: ಏಕದಿನ ಕ್ರಿಕೆಟ್ನಲ್ಲಿ ಉಭಯ ತಂಡಗಳು ಇದುವರೆಗೆ ನಾಲ್ಕು ಬಾರಿ ಮುಖಾಮುಖಿಯಾಗಿವೆ. ಈ 4 ಪಂದ್ಯಗಳಲ್ಲೂ ನ್ಯೂಝಿಲೆಂಡ್ ತಂಡವೇ ಜಯ ಸಾಧಿಸಿದೆ. ಇದಾಗ್ಯೂ ಇಂದಿನ ಪಂದ್ಯದ ಮೂಲಕ ಕಿವೀಸ್ ವಿರುದ್ಧ ಮೊದಲ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ ನೆದರ್ಲೆಂಡ್ಸ್ ತಂಡ.
ತಾರಾ ಆಟಗಾರರ ಗೈರಿನಲ್ಲಿ ಕಣಕ್ಕಿಳಿದಿದ್ದರೂ ಇಂಗ್ಲೆಂಡ್ ವಿರುದ್ಧ ಕಿವೀಸ್ ಅಬ್ಬರದ ಪ್ರದರ್ಶನ ನೀಡಿತ್ತು. ಡೆವೋನ್ ಕಾನ್‌ವೇ, ರಚಿನ್ ರವೀಂದ್ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ ಜಯಗಳಿಸಿತ್ತು. ತಂಡದ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಈ ಪಂದ್ಯಕ್ಕೂ ಅಲಭ್ಯರಾಗಲಿದ್ದು, ವೇಗಿಗಳಾದ ಟಿಮ್ ಸೌಥಿ, ಲಾಕಿ ಫರ್ಗ್ಯೂಸನ್ ತಂಡಕ್ಕೆ ಮರಳುವ ನಿರೀಕ್ಷೆಯಿದೆ.
ಅರ್ಹತಾ ಟೂರ್ನಿಯಲ್ಲಿ ಬಲಿಷ್ಠ ವೆಸ್ಟ್‌ಇಂಡೀಸನ್ನು ಹೊರಹಾಕಿರುವ ಡಚ್ ಪಡೆ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಪರಾಭವಗೊಂಡಿದೆ. ಪಾಕ್‌ಗೆ ತೀವ್ರ ಪೈಪೋಟಿ ನೀಡಿದ ಹೊರತಾಗಿಯೂ ಕೊನೆಯಲ್ಲಿ ಎಡವಿತ್ತು. ಸುಧಾರಿತ ಪ್ರದರ್ಶನದೊಂದಿಗೆ ಕಿವೀಸನ್ನು ಮಣಿಸಲು ತಂಡ ಸಜ್ಜಾಗಿದೆ.