ನೆಲಮಂಗಲ, ಅ. 30: ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವಂತ ಘಟನೆ ನಡೆದಿದೆ. ಅನುಮಾನಾಸ್ಪದ ರೀತಿಯಲ್ಲಿ ಕೊಲೆ ಶಂಕೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ಕಾವೇರಿ ನಗರದ ನಿವಾಸಿಗಳಾದ ಶಾರದ ಮತ್ತು ಶಿವಬಸವಯ್ಯ ದಂಪತಿ ಮನೆಯಲ್ಲಿ ಪತಿ ಶಿವಬಸವಯ್ಯ ಎಂದಿನಂತೆ ಕೆಲಸಕ್ಕೆ ತೆರಳಿದ್ದ ಬಳಿಕ ಪತ್ನಿ ಶಾರಾದರನ್ನು ಕಿರಾತಕರು ಮಹಿಳೆಯನ್ನು ಮೊಬೈಲ್ ಚಾರ್ಜರ್ ಕೇಬಲ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿರದ್ದಾರೆ ಎನ್ನಲಾಗಿದೆ. ಮೃತಳ ಪತಿ ಶಿವಬಸವಯ್ಯನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನೆಲಮಂಗಲ ಟೌನ್ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.